ನಂಜನಗೂಡಿನಲ್ಲಿ ಭಯದ ವಾತಾವರಣ ಸೃಷ್ಟಿ

Oplus_131072
Oplus_131072
Published on

ನಂಜನಗೂಡು: ನಂಜನಗೂಡಿನಂತಹ ಪವಿತ್ರ ಧಾರ್ಮಿಕ ಕ್ಷೇತ್ರದಲ್ಲಿ ಹರಕೆ ಬಿಟ್ಟಿದ್ದ ಗೋವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿ ಹಾಕಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಗುರುವಾರ ಹರಕೆ ಗೋವಿನ ಬಾಲವನ್ನು ಕತ್ತರಿಸಿ ಹಾಕಿರುವ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಅವರು, ನಂಜನಗೂಡು ದೇವಸ್ಥಾನಕ್ಕೆ ಹಲವರು ಹರಕೆ ಹೊತ್ತ ಗೋವುಗಳನ್ನು ಬಿಡುತ್ತಿದ್ದಾರೆ. ಸರ್ಕಾರ ದೇವಸ್ಥಾನಕ್ಕೆ ಗೋವುಗಳನ್ನು ರಕ್ಷಿಸಲು ಒಬ್ಬರನ್ನು ನೇಮಕ ಮಾಡಿದೆ. ಗೋವುಗಳಿಗೆ ಸಂಬಂಧಿಸಿದಂತೆ ಒಂದು ರಿಜಿಸ್ಟ್ರರ್ ಕೂಡ ಇಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಹರಕೆಯ ಗೋವುಗಳಿಗೆ ಮುದ್ರೆಗಳನ್ನು ಹಾಕುತ್ತಿದ್ದರು. ಅದನ್ನು ಕೂಡ ಈಗ ನಿಲ್ಲಿಸಲಾಗಿದೆ. ಪ್ರಸ್ತುತ ಗೋವುಗಳ ಸಂಖ್ಯೆ ಎಷ್ಟಿದೆ ಎಂಬ ಮಾಹಿತಿ ಕೂಡ ಲಭ್ಯವಿಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ಇಂತಹ ಅಮಾನವೀಯ ಘಟನೆಯನ್ನು ಖಂಡಿಸುತ್ತೇನೆ. ಇಂತಹ ವಿಕೃತಿ ಮೆರೆದ ದುಷ್ಕರ್ಮಿಯನ್ನು ಕೂಡಲೇ ಬಂಧಿಸಬೇಕು. ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆಡಳಿತ ಸಂಪೂರ್ಣವಾಗಿ ಕುಸಿದಿದೆ ಎಂದರು.

ತಾಲೂಕು ಅಧ್ಯಕ್ಷ ಸಿದ್ದರಾಜು, ಚಿಕ್ಕರಂಗ ನಾಯ್ಕ, ಅನಂತ್, ಶ್ರೀನಿವಾಸ ರೆಡ್ಡಿ, ಕೃಷ್ಣಪ್ಪ ಗೌಡ, ಎಬಿವಿಪಿ ಸಿದ್ದರಾಜು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net