ನ.೮, ೯ ರಂದು ರಾಷ್ಟ್ರೀಯ ಸಮ್ಮೇಳನ

bkt-6-6
ಬಾಗಲಕೋಟೆ ನಗರದಲ್ಲಿ ಎಂಆರ್‌ಎನ್ ಆಯುರ್ವೇದಿಕ್ ಕಾಲೇಜಿ ಡೀನ್ ಡಾ. ಶಿವಕುಮಾರ ಗಂಗಾಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಪ್ರಲ್ಹಾದ್ ಗಂಗಾವತಿ, ಡಾ. ವಿಜಯಕುಮಾರ ಜವಡಿ, ಡಾ. ಈಶ್ವರ ಪಾಟೀಲ, ಡಾ. ಸಂಜಯ ಚಿನಿವಾಲ ಹಾಗೂ ಡಾ. ಮನೋಹರ ಸಾರಂಗಿ ಇದ್ದರು.
Published on

ಬಾಗಲಕೋಟೆ: ಎಂಆರ್‌ಎನ್ ಆಯುರ್ವೇದಿಕ್ ಕಾಲೇಜಿನಲ್ಲಿ ನ.೮ ಹಾಗೂ ೯ ರಂದು ಎನ್‌ಸಿಐಎಸ್‌ಎಂ ಪಠ್ಯಕ್ರಮದ ಕುರಿತ ರಾಷ್ಟ್ರೀಯ ಸಮ್ಮೇಳನ ಹಾಗೂ ಕ್ಯಾನ್ಸರ್ ತಡೆಗಟ್ಟುವ ಹಾಗೂ ಗುಣಪಡಿಸುವ ಪರಿಪೂರ್ಣ-೨೦೨೪ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಡೀನ್ ಡಾ. ಶಿವಕುಮಾರ ಗಂಗಾಲ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಲಿದ್ದಾರೆ. ಕಾಲೇಜಿನ ಮುಖ್ಯಸ್ಥೆ ಮಾಧುರಿ ಮುಧೋಳ ಅಧ್ಯಕ್ಷತೆ ವಹಿಸಲಿದ್ದಾರೆ. ನವದೆಹಲಿಯ ಎನ್‌ಸಿಐಎಸ್‌ಎಂನ ಬೋರ್ಡ್ ಆಫ್ ಆಯುರ್ವೇದಿಕ್‌ನ ಅಧ್ಯಕ್ಷ ಡಾ. ಬಿ.ಎಸ್.ಪ್ರಸಾದ ಭಾಗವಹಿಸಲಿದ್ದಾರೆ ಎಂದರು.

ನ.೧೫ ರಿಂದ ೩೦ರ ವರೆಗೆ ಕಾಲೇಜಿನಲ್ಲಿ ಪಂಚಕರ್ಮ ಸೇರಿದಂತೆ ಕೀಲು ನೋವುಗಳಿಗೆ ಹಾಗೂ ಇನ್ನೀತರ ಎಲ್ಲ ಕಾಯಿಲೆಗಳಿಗೆ ಔಷಽ ಹೊರತು ಪಡಿಸಿ, ಉಚಿತ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದ್ದು, ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲಾಗುವುದು ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಪ್ರಲ್ಹಾದ್ ಗಂಗಾವತಿ, ಡಾ. ವಿಜಯಕುಮಾರ ಜವಡಿ, ಡಾ. ಈಶ್ವರ ಪಾಟೀಲ, ಡಾ. ಸಂಜಯ ಚಿನಿವಾಲ ಹಾಗೂ ಡಾ. ಮನೋಹರ ಸಾರಂಗಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net