

ಬಾಗಲಕೋಟೆ: ಮಿತ್ರರಾದ ದಿ.ವಿಜಯ ಆಚಾರ್ಯ, ದಿ.ಹರ್ಷಿತ ಸಕ್ರಿ, ದಿ.ಶಿವರಾಜ ಬೋಸಲೆ, ದಿ.ಡ್ಯಾನಿಯಲ್ ನ್ಯೂಟನ್ ಸ್ಮರಣಾರ್ಥವಾಗಿ ಬಾಗಲಕೋಟೆ ನಗರದಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಲೆಂಜೆಡ್ಸ್ ಮೆಮೋರೆಬಲ್ ಕಪ್ ಟೊರ್ನಾಮೆಂಟ್ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಹೇಳಿದರು.
ಫ್ರೇಂಡ್ಸ ಆ್ಯಂಡ್ ಟಿಂ ಮೆಟ್ಸ್ ಸಂಘಟನೆ ವತಿಯಿಂದ ಲಿಯೋಟ್ಸ್ ಸ್ಪೋಟ್ಸ್ ಫೌಂಡೇಶನ್ ಬಾಗಲಕೋಟೆ ಸಹಯೋಗದಲ್ಲಿ ಟಿ-೨೦ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ನ.೧೩ ರಿಂದ ನ.೨೦ ವರೆಗೆ ನವನಗರದ ಅಂಜುಮನ್ ಕ್ರೀಡಾಂಗಣದಲ್ಲಿ ಪಂದ್ಯಾ ವಳಿಗಳು ನಡೆಯಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಉದ್ಘಾಟಿಸಲಿದ್ದಾರೆ. ಲೆಂಜೆಡ್ಸ್ ಮೆಮೋರೆಬಲ್ ಕಪ್ ಟೊರ್ನಾಮೆಂಟ್ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ.ಆರ್. ಎಸ್.ರಾಜು, ಚಿತ್ರ ನಿರ್ಮಾಪಕಿ ಗೌರಿ, ಅಂಜುಮನ್ ಸಂಸ್ಥೆಯ ಆಡಳಿತಾಧಿಕಾರಿ ಬಾವಾಸಾಹೇಬ ಎಸ್.ಖಾಜಿ, ಯುವ ನಾಯಕರಾದ ಸಂತೋಷ ಹೊಕ್ರಾಣಿ, ರವಿ ಕುಮಟಗಿ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಇಮಾಮ್ ಜಾಫರ್ ಬೇಪಾರಿ, ಹಿರಿಯ ಕ್ರಿಕೆಟ್ ಕೋಚರ್ ರವಿ ಮುಗದುಮ್ ಆಗಮಿಸಲಿದ್ದಾರೆ ಎಂದು ಹೇಳಿದರು.
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸಲು, ಕಳೆದು ಕೊಂಡಿರುವ ಮಿತ್ರರ ರನ್ನು ಮತ್ತೊಮ್ಮೆ ಸ್ಮರಣೆ ಮಾಡಿಕೊಳ್ಳಲು ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದರು.
ರವಿ ಮಗದುಮ್ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಕೆಎಸ್‌ಸಿಎ ರಾಯಚೂರು ಝೂನ್‌ಗೆ ನೊಂದಾಯಿತ ಎಂಟು ತಂಡಗಳು ಭಾಗವಹಿಸಲಿವೆ. ನಾಲ್ಕು ತಂಡಗಳಂತೆ ಎರಡು ತಂಡಗಳಲ್ಲಿ ಆಡಿಸಲಾಗುವುದು. ನ.೧೯ ರಂದು ಎರಡು ಸೆಮಿ ಫೈನಲ್ ಹಾಗೂ ನ.೨೦ ರಂದು ಫೈನಲ್ ಪಂದ್ಯ ಜರುಗಲಿದೆ ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ವಿವಿಧ ಪ್ರದರ್ಶನಗಳು ನೀಡಿದ ಆಟಗಾರರರಿಗೆ ವೈಯಕ್ತಿಕ ಪ್ರೋತ್ಸಾಹಕರ ಬಹುಮಾನ ನೀಡಲಾಗುವುದು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ೫೦ ಸಾವಿರ ರೂ. ನಗದು, ಟ್ರೋಫಿ, ದ್ವಿತೀಯ ಬಹುಮಾನ ಪಡೆದ ತಂಡಕ್ಕೆ ೨೫ ಸಾವಿರ ರೂ. ಟ್ರೋಫಿ ಘೋಷಿಸಲಾಗಿದೆ. ಆಟಗಾರರಿಗೆ ಉಚಿತ ಊಟ ವ್ಯವಸ್ಥೆ ಮಾಡಲಾಗಿದ್ದು, ಬಾಗಲಕೋಟೆ ಜಿಲ್ಲೆಯವರು ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಠ್ಠಲ ಮಾರ್ಕೊಡ್, ವೀರಣ್ಣ ಬಂಗಾರಶೆಟ್ಟರ, ಚಂದ್ರು ಕಲ್ಲೂರ, ಮುಸ್ತಾಕ ಡಾಲಯತ್ ಉಪಸ್ಥಿತರಿದ್ದರು.