ನ.26 ರಂದು ಶರಣ ಬಸವ ಶ್ರೀಗಳು ಸಂಸ್ಮರಣೋತ್ಸವ

IMG-20231018-WA0003
Published on

ಬಾಗಲಕೋಟೆ: ಲಕ್ಷಾಂತರ ಜನ ಸೇರಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಂಘಟನೆಯ ಶಕ್ತಿಯನ್ನು ಭೋವಿ ವಡ್ಡರ ಸಮಾಜ ತೋರಿಸಲು ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವ, ಗದ್ಗುಗೆ ಶಿಲಾಮಂಟಪ ಶಿಲಾನ್ಯಾಸ ಹಾಗೂ ಗುರು ಕುಟೀರ ಉದ್ಘಾಟನೆಯ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. 

ನ.26 ದಂದು ಜರುಗಲಿರುವ ಸಮಾರಂಭಕ್ಕೆ ಮುಖ್ಯಮಂತ್ರಿಗಳು ಸಚಿವರುಗಳು ಶಾಸಕರು ನಾಡಿನ ಪ್ರಮುಖ ಮಠಾಧೀಶರನ್ನು ಆಮಂತ್ರಿಸಲು ತೀರ್ಮಾನ ಮಾಡಲಾಯಿತು. ಪೂರ್ವಭಾವಿ ಸಮಾರಂಭದ ಸಾನ್ನಿಧ್ಯವನ್ನು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿವಹಿಸಿದ್ದರು.

ಅಶೋಕ ಲಿಂಬಾವಳಿ, ಮುಧೋಳ ಸತೀಶ್ ಬಂಡಿ, ಇಳಕಲ್ಲ ಕಮಲಪ್ಪ ಜಾಲಿಹಾಳ, ಲಿಂಗಸ್ಗೂರು ಸಿದ್ಧು ಬಂಡಿ, ವಿಜಯಪುರ ರಾಮು ಹೊಸಪೇಟೆ, ಸುರೇಶ ಬೇನಾಳ, ರಾಯಚೂರು ಯಲ್ಲಪ್ಪ, ಚಂದ್ರಶೇಖರ್, ಯಾದಗಿರಿ ನಾಗಪ್ಪ ಬೆನಕಲ್, ದೇವರಾಜ, ಕಲ್ಬುರ್ಗಿ ಮಲ್ಲಿಕಾರ್ಜುನ ಕುಸ್ತಿ, ತಿಪ್ಪಣ್ಣ ಒಡೆಯರಾಜು, ವಿಠಲ ನೆಲೋಗಿ, ಧಾರವಾಡ ಜಯಪ್ರಕಾಶ ಬದಾಮಿ, ಬೆಳಗಾವಿ ಲಕ್ಷ್ಮಣ, ಗದಗ ರಾಘು ಚಿಂಚಲಿ, ಬಳ್ಳಾರಿ ಜಲಾಲಕುಮಾರ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net