

ಬಾಗಲಕೋಟೆ:ಅಭಿಮನ್ಯು ತನ್ನ ತಾಯಿ ಗರ್ಭದಲ್ಲಿರುವಾಗಲೇ ಚಕ್ರವ್ಯೂಹ ಬೇದಿಸುವುದನ್ನು ಕಲಿತಿದ್ದ. ಶಿಕ್ಷಣ ಎಂಬುದು ಗರ್ಭಕೋಶದಿಂದ ಶುರುವಾಗಿ ವಿಶ್ವಕೋಶದವರೆಗೆ ಇರುತ್ತದೆ. ಧ್ಯಾನ, ಯೋಗದ ಬಲದಿಂದ ಅವುಗಳನ್ನು ಸಿದ್ಧಿಸಿಕೊಳ್ಳಬಹುದಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರಿ ಉಪನಿರ್ದೇಶಕ ಎಚ್.ಜಿ.ಮಿರ್ಜಿ ಹೇಳಿದರು.
ವಿದ್ಯಾಗಿರಿಯ ಶ್ರೀಸಾಯಿ ಮಂದಿರದ ಆವರಣದಲ್ಲಿ ಪಿರಾಮಿಡ್ ಸ್ಪಿರಿಚುವಲ್ ಸೊಸೈಟಿ ಆಫ್ ಇಂಡಿಯಾ, ಶ್ರೀಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮ, ವರದಾನೇಶ್ವರಿ ಮಹಿಳಾ ಸಂಘ ಹಾಗೂ ವಿದ್ಯಾಗಿರಿ ಸಮಾನ ವಯಸ್ಕರ ಹಿರಿಯ ನಾಗರಿಕೆ ವೇದಿಕೆಗಳಿಂದ ಹಮ್ಮಿಕೊಂಡಿದ್ದ ೨೧ ದಿನಗಳ ಉಚಿತ ಆನಪಾನಸತಿ ಧ್ಯಾನ ದಾಸೋಹ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳಿಗೆ ೬ನೇ ವಯಸ್ಸಿನಿಂದ ಶಿಕ್ಷಣ ಶುರುವಾಗೋದಿಲ್ಲ. ಗರ್ಭಕೋಶದಲ್ಲಿರುವಾಗಲೇ ಅವುಗಳಿಗೆ ಶಿಕ್ಷಣ ನೀಡಲಾಗುತ್ತದೆ. ಅದು ಪುರಾತನ ಕಾಲದಿಂದಲೂ ಇತ್ತು. ಮುಂದವರಿದ ಆಧುನಿಕ ದೇಶಗಳಲ್ಲೂ ಅಂಥದೊAದು ಶಿಕ್ಷಣ ಜಾರಿಗೆ ಬರುತ್ತಿದೆ. ಭಾರತೀಯರಾದ ನಮಗೆ ಯೋಗ, ಧ್ಯಾನದಂಥ ಅಪೂರ್ವ ಶಕ್ತಿ ಲಭಿಸಿವೆ. ಅವುಗಳನ್ನು ಬಳಿಸಿಕೊಂಡು ಮಕ್ಕಳನ್ನು ಸಶಕ್ತರನ್ನಾಗಿಸಬೇಕೆಂದರು. ಗರ್ಭಿಣಿಯರಿಗಾಗಿ ವಿಶೇಷ ಶಿಬಿರ ಆಯೋಜಿಸಲು ಅವರು ಸಲಹೆ ಮಾಡಿದರು.
ಪಿರಾಮಿಡ್ ಸ್ಪಿರಿಚುವಲ್ ಸೊಸೈಟಿ ಜಿಲ್ಲಾ ಸಂಚಾಲಕ, ಧ್ಯಾನಗುರು ರಾಜಶೇಖರ ಅಡಿಕೇನವರ ಮಾತನಾಡಿ, ೨೦೨೧ರಲ್ಲಿ ಬಾಗಲಕೋಟೆಗೆ ಬ್ರಹ್ಮರ್ಷಿ ಸುಭಾಷ್ ಪತ್ರಿಜಿ ಅವರು ಭೇಟಿ ನೀಡಿದಾಗ ಬಾಗಲಕೋಟೆಯ ಭಾಗ್ಯದ ಕೋಟೆ, ಧ್ಯಾನದ ಕೋಟೆ ತೆರೆದಿದೆ ಎಂದಿದ್ದರು.
ಅದರಂತೆ ನಾವೆಲ್ಲ ಸೇರಿ ಬಾಗಲಕೋಟೆಯಲ್ಲಿ ಧ್ಯಾನಾಸಕ್ತರ ಬಳಗವನ್ನು ಹೆಚ್ಚಿಸಿದ್ದೇವೆ. ಇದು ಇನ್ನೂ ಹೆಚ್ಚಾಗಬೇಕು ಅದಕ್ಕೆಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಧ್ಯಾನಾಸಕ್ತರ ಕೋರಿಕೆಯಂತೆ ಶ್ರೀಸಾಯಿಮಂದಿರದ ಬಯಲು ರಂಗಮAದಿರದ ಮೇಲ್ಛಾವಣಿಯಲ್ಲಿ ಪಿರಿಮಿಡ್ ನಿರ್ಮಸಲು ಶ್ರೀಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಪದಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಎಲ್ಲರೂ ಸೇರಿ ಅದರ ನಿರ್ಮಾಣ ಕಾರ್ಯದಲ್ಲಿ ಒಂದಾಗೋಣ ಎಂದರು.
ರಾಷ್ಟಿçÃಯ ಸ್ವಯಂ ಸೇವಕ ಸಂಘದ ನಿಕಟಪೂರ್ವ ಜಿಲ್ಲಾ ಸಂಘಚಾಲಕ ಡಾ.ಸಿ.ಎಸ್.ಪಾಟೀಲ, ಶ್ರೀಕುಮಾರೇಶ್ವರ ವಿಶ್ವಧರ್ಮ ಶಾಂತಾಶ್ರಮದ ಕಾರ್ಯಾಧ್ಯಕ್ಷ ಶ್ರೀಶೈಲ ಕರಿಶಂಕರಿ, ನಿವೃತ್ತ ಬಿಇಒ ಎನ್.ಬಿ.ಗೊರವರ, ಹಿರಿಯ ನಾಗರಿಕರ ವೇದಿಕೆಯ ಬಸವರಾಜ ಇಂಡಿ, ಅನ್ನಪೂರ್ಣ ಹುಲ್ಯಾಳ, ಬಸವರಾಜ ಮಿಟ್ಟಲಕೋಡ, ಸತೀಶ ಕಲಬುರಗಿ, ತಿಪಶೆಟ್ಟಿ, ಮಹಾಬಳೇಶ್ವರ ಗುಂಡಗುAಟಿ, ನಾರಾಯಣ ಸೋನಾರ, ಸಿದ್ದಪ್ಪ ಯಂಡಿಗೇರಿ, ಜಯಶ್ರೀ ಭದ್ರಶೆಟ್ಟಿ ಮತ್ತಿತರರು ಇದ್ದರು.