ಧೈರ್ಯ-ಅಭಿಮಾನದಿಂದ ಕೆಲಸ ಮಾಡಿ

bkt-22-7
ಬಾಗಲಕೋಟೆ ನಗರದ ವಾರ್ಡ್ ನಂಬರ್ ೨ ರಲ್ಲಿ ಶಾಸಕ ವೀರಣ್ಣ ಚರಂತಿಮಠ ಮನೆ ಮನೆಗೆ ತೆರಳಿ ಕರಪತ್ರಗಳನ್ನು ವಿತರಿಸಿದರು.
Published on

ಬಾಗಲಕೋಟೆ: ಬಾಗಲಕೋಟೆ ಮತಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕೆಲಸಗಳು ಆಗಿವೆ. ಕಾರ್ಯಕರ್ತರು ಧೈರ್ಯ, ಅಭಿಮಾನದಿಂದ ಪಕ್ಷದ ಕೆಲಸ ಮಾಡಬೇಕು ಎಂದು ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ರೈಲು ನಿಲ್ದಾಣ ಹತ್ತಿರ ೨ನೇ ವಾರ್ಡ್ನಲ್ಲಿ ಭಾನುವಾರ ಬಿಜೆಪಿ ನಗರ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಬೂತ್ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತಕ್ಷೇತ್ರದ ಅಮೀನಗಡ, ಬೇವೂರ, ಭಗವತಿ ಗ್ರಾಮಗಳು ಸೇರಿದಂತೆ ಬಾಗಲಕೋಟೆ ನಗರದ ೩೫ ವಾರ್ಡಗಳ ಪೈಕಿ ೩೪ ವಾರ್ಡ್ಗಳಲ್ಲಿ ಪಕ್ಷದ ಕಾರ್ಯಕರ್ತರು ಬೂತ ವಿಜಯ ಅಭಿಯಾನ ಯಶಸ್ವಿಯಾಗಿದ್ದು, ಬಿಜೆಪಿ ಬಲಿಷ್ಠ, ಉತ್ತಮ ಕಾರ್ಯಕರ್ತರ ಪಡೆ ಹೊಂದಿದೆ. ಅತ್ಯುತ್ತಮ ಕಾರ್ಯಕರ್ತರ ವ್ಯವಸ್ಥೆ ಇರುವುದು ಬಿಜೆಪಿಯಲ್ಲಿ ಮಾತ್ರ ಎಂದರು.
ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ, ಸರ್ಕಾರಿ ಕಾರ್ಯಕ್ರಮ, ಯೋಜನೆ ಅನುಷ್ಠಾನದಲ್ಲಿ ರಾಜಿ ಮಾಡಿಕೊಂಡಿಲ್ಲ. ನಮ್ಮ ಪಕ್ಷದ ಶಿಸ್ತು ಸಂಯಮ ನಮಗೆ ಅರಿವಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಕಾರ್ಯಕರ್ತರ ಪಡೆ ಹೆಚ್ಚಿದೆ. ಬಿಜೆಪಿ ಪಕ್ಷವನ್ನು ಮೊತ್ತಮ್ಮೆ ರಾಜ್ಯದಲ್ಲಿ ಸರ್ಕಾರ ರಚಿಸುವಂತೆ ಎಲ್ಲರು ಶ್ರಮೀಸೋಣ ಎಂದು ಹೇಳಿದರು.
ವಿ.ಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಬಿಟಿಡಿಎ ಮಾಜಿ ಅಧ್ಯಕ್ಷರಾದ ಜಿ.ಎನ್.ಪಾಟೀಲ, ಸಿ.ವಿ ಕೋಟಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ, ಮುಖಂಡರಾದ ರಾಜು ರೇವಣಕರ, ರಾಜು ನಾಯ್ಕರ, ಆನಂದ ಇಂಗಳಗಿ, ಈರಣ್ಣ ಹಳೆಗೌಡರ,ಸತ್ಯನಾರಯಣ ಹೆಮಾದ್ರಿ, ಸದಾನಂದ ನಾರಾ, ಉಮೇಶ್ ಹಂಚಿನಾಳ, ರಾಜು ಗಾಣಿಗೇರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net