

ಹಿರೇಕೆರೂರ: ಮನಸ್ಸಿನಲ್ಲಿ ಸಾಧಿಸುವ ಛಲ ಇರಬೇಕು, ಅದು ಗುರಿ ಮುಟ್ಟುವವರೆಗೆ ಧೃತಿಗೆಡದೆ ನಿರಂತರವಾಗಿ ಪ್ರಯತ್ನ ಪಡಬೇಕು ಅಂದಾಗ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ಸ್ಥಳೀಐ ಪಟ್ಟಣ ಪಂಚಾಯಿತಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಎಸ್.ಎಫ್.ಸಿ ಮುಕ್ತನಿಧಿ ಹಾಗೂ ಪಪಂ ಮುಕ್ತ ನಿಧಿಯಿಂದ 3.15 ಲಕ್ಷ ರೂ. ವೆಚ್ಚದಲ್ಲಿ 71 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಮತ್ತು 4 ವಿಶೇಷಚೇತನರಿಗೆ ತಲಾ 57 ಸಾವಿರ ರೂ. ಪ್ರೋತ್ಸಾಹ ಧನದ ಚೆಕ್ ಅನ್ನು ವಿತರಿಸಿ ಅವರು ಮಾತನಾಡಿದರು.
ಫಲಾನುಭವಿಗಳು ತಾವು ಪಡೆದ ಹೊಲಿಗೆ ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಅಭಿವೃದ್ಧಿ ಹೊಂಬೇಕು ಎಂದು ಸಲಹೆ ನೀಡಿದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಶ್ರಮವಹಿಸಿ ದುಡಿಯುವ ವ್ಯಕ್ತಿಗೆ ಎಂದಿಗೂ ಬಡತನ ಬರುವುದಿಲ್ಲ, ದುಡಿದು ತಿನ್ನುವುದೆ ನಿಜವಾದ ಬದುಕು ಎಂದರು. ಪಪಂ ಅಧ್ಯಕ್ಷ ಗುರುಶಾಂತ ಯತ್ತಿನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಸುಧಾ ಚಿಂದಿ, ಸದಸ್ಯರಾದ ಮಹೇಂದ್ರ ಬಡಳ್ಳಿ, ಕವಿತಾ ಹಾರ್ನಳ್ಳಿ, ದಿಲಶಾದಿ ಬಳಿಗಾರ, ಸನಾವುಲ್ಲಾ ಮಕಾಂದಾರ, ರಾಜು ಕರಡಿ, ಬಸವರಾಜ ಕಟ್ಟಿಮನಿ, ವಿಜಯಶ್ರೀ ಬಂಗೇರ, ಶಂಶಾದ ಕುಪ್ಪೇಲೂರ, ರಜಿಯಾ ಅಸದಿ, ಕುಸುಮಾ ಬಣಕಾರ, ಕಂಠಾಧರ ಅಂಗಡಿ, ರಮೇಶ ಕೋಡಿಹಳ್ಳಿ, ಹನುಮಂತಪ್ಪ ಕುರಬರ, ಪೂಜಾ ತಂಬಾಕದ, ಹರೀಶ ಕಲಾಲ, ಅಲ್ತಾಫಖಾನ್ ಪಠಾಣ ಹಾಗೂ ಫಲಾನುಭವಿಗಳು ಇದ್ದರು. ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ್, ರಾಘವೇಂದ್ರ ಹಂಚಿನಮನಿ ನಿರ್ವಹಿಸಿದರು.