ಧುತ್ತರಗಾಂವ್‌ದಲ್ಲಿ ನವರಾತ್ರಿ ಉತ್ಸವ ಅ.2ರಿಂದ

chandrashekar hiremath new
Published on

ಕಲಬುರಗಿ: ಆಳಂದ ತಾಲೂಕು ಧುತ್ತರಗಾಂವ್ ಗ್ರಾಮದ ಶಿವಶಕ್ತಿ ದೇವಾಲಯದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಅ.೩ರಿಂದ ೧೨ರವರೆಗೆ ಶ್ರೀದೇವಿ ಮಹಾತ್ಮೆ ಪ್ರವಚನ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ಚಂದ್ರಶೇಖರ ಹಿರೇಮಠ ತಿಳಿಸಿದರು.
ಅ.೩ರಂದು ಘಟ ಹಾಗೂ ಕಳಶ ಸ್ಥಾಪನೆ ನಡೆಯಲಿದ್ದು, ಶಿವಯ್ಯ ಸ್ವಾಮಿ ಆಲೂರ ನೆರವೇರಿಸುವರು. ಅ.೪ರಂದು ಶಾಸಕ ಎಂ.ವೈ.ಪಾಟೀಲ್ ಅವರು ಶೈಲಪುತ್ರಿ ಹಾಗೂ ಅ.೫ರಂದು ಕೆಕೆಆರ್‌ಡಿಬಿ ಮಾಜಿ ಅಧ್ಯP್ಷÀ ದತ್ತಾತ್ರೇಯ ಪಾಟೀಲ್ ರೇವೂರ ಅವರು ಬ್ರಹ್ಮಚಾರಣಿ ಪೂಜೆ ನೆರವೇರಿಸುವರು. ಇನ್ನುಳಿದಂತೆ ೬ರಂದು ಚಂದ್ರಘAಟಾ, ೭ರಂದು ಕೂಷ್ಮಾಂಡ, ೮ರಂದು ಸ್ಕಂದಮಾತಾ, ೯ರಂದು ಕಾತ್ಯಾಯಿನಿ, ೧೦ರಂದು ಕಾಳರಾತ್ರಿ, ೧೧ರಂದು ಮಹಾಗೌರಿ, ೧೨ರಂದು ಸಿದ್ಧಿಧಾತ್ರಿ ಪೂಜೆ ನೆರವೇರಿಸಲಾಗುತ್ತದೆ ಎಂದು ಭಾನುವಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
೧೧ರಂದು ಸಂಜೆ ೭ಕ್ಕೆ ಮಹಿಳೆಯರ ಪಾದಪೂಜೆ ಮಾಡಲಾಗುವುದು. ೧೦೮ ಮಹಿಳೆಯರು ದುರ್ಗಾದೇವಿಗೆ ಮಂಗಳಾರತಿ ಮಾಡುವರು. ಕಟ್ಟಿಮನಿ ಹಿರೇಮಠದ ಶ್ರೀ ವೀರಭದ್ರ ಶಿವಾಚಾರ್ಯ, ಮಲಕೂಡದ ಶ್ರೀ ಗುರುಲಿಂಗ ಶಿವಾಚಾರ್ಯ, ನಿಂಬರ್ಗಾದ ಶ್ರೀ ನೀಲಕಂಠ ಶಿವಾಚಾರ್ಯ, ಆಳಂದದ ಶ್ರೀ ಸಿದ್ಧಲಿಂಗ ಶಿವಾಚಾರ್ಯ, ಭೂಸನೂರದ ಶ್ರೀ ಬಸವಲಿಂಗ ಶಿವಾಚಾರ್ಯ, ನಿಂಬರ್ಗಾದ ಶ್ರೀ ಶಿವಲಿಂಗ ದೇವರು ಸಾನ್ನಿಧ್ಯ ವಹಿಸುವರು. ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್, ಮಾಜಿ ಶಾಸಕ ಸುಭಾಷ ಗುತ್ತೇದಾರ್ ಭಾಗವಹಿಸುವರು. ಪೂಜ್ಯ ಲಿಂ.ಶಿವಬಸಯ್ಯ ಹಿರೇಮಠ ಪ್ರತಿಷ್ಠಾನದಿಂದ ಉದ್ಯಮಿ ಬಸವರಾಜ ಭೀಮಳ್ಳಿ ಅವರಿಗೆ ಶಿವಭೂಷಣ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಅಣವೀರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net