ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೊರಬರಲಿ

22 CRP-1A,
Published on

ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಬಿಜೆಪಿಯ ಧರ್ಮಸ್ಥಳ ಚಲೋ ಅಭಿಯಾನದಲ್ಲಿ ಪಾಲ್ಗೊಂಡಿರುವ ಮುಖಂಡರನ್ನು ಶುಕ್ರವಾರ ಪಟ್ಟಣದಲ್ಲಿ ಸ್ವಾಗತಿಸಲಾಯಿತು.

ತಾಲೂಕು ಬಿಜೆಪಿ ಅಧ್ಯಕ್ಷ ಪರಮ ಗಂಗಾಧರ್ ಮಾತನಾಡಿ, ಹಿಂದು ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಕರ್ನಾಟಕದಾದ್ಯಂತ ದೇವಾಲಯದ ಪಾವಿತ್ರ್ಯವನ್ನು ರಕ್ಷಿಸಲು ಧರ್ಮಸ್ಥಳದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ, ಸ್ವಾರ್ಥಪರ ಗುಂಪುಗಳು ನಡೆಸುತ್ತಿರುವ ಈ ನಿರಾಧಾರ ಅಪಪ್ರಚಾರದಿಂದ ಕರ್ನಾಟಕದ ಕೋಟ್ಯಂತರ ಧರ್ಮಸ್ಥಳ ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಘಾಸಿಯಾಗಿದೆ. ಎಸ್‌ಐಟಿ ತನಿಖೆ ಮಾಡಲಿ ಅದಕ್ಕೇನು ಸಮಸ್ಯೆಯಿಲ್ಲ. ಆದರೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಸಹಿಸೋದಿಲ್ಲ. ನಮ್ಮ ಧರ್ಮದ ಮೇಲೆ ಎಷ್ಟೋ ಅಪಪ್ರಚಾರಗಳು ಮೊದಲಿನಿಂದಲೂ ಆಗಿದೆ. ಆದರೆ ನಮ್ಮ ಧರ್ಮ ಅದಕ್ಕೆಲ್ಲ ಜಗ್ಗಿಲ್ಲ. ಈಗಾಗಲೇ ಅಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಗೊತ್ತು. ಇದರ ಹಿಂದೆ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಗೊತ್ತಾಗಬೇಕು. ನಾವು ಧರ್ಮಸ್ಥಳದ ಜತೆಗೆ ಇದ್ದೇವೆ ಎಂದರು.

ಬೆಂಗಳೂರು ಮಂಗಳೂರು ರಸ್ತೆಯ ಬೈಪಾಸ್‌ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೊರಿದರು. ಸ್ವಾಗತ ಕೋರುತ್ತಿದ್ದಂತೆ ಕಾರ್ಯಕರ್ತರು ‘ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಘೋಷಣೆಯೊಂದಿಗೆ ಅಭಿಯಾನವನ್ನು ಬೀಳ್ಕೊಟ್ಟರು. ಸುಮಾರು 300 ಕ್ಕೂ ಹೆಚ್ಚು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದರು.

ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ನಂಬಿಹಳ್ಳಿ , ಶ್ರವಣಬೆಳಗೊಳ ರಂಗನಾಥ್, ತಾಲೂಕು ಕಾರ್ಯದರ್ಶಿ ಹಿರಿಬಿಳ್ತಿ ನಾಗೇಶ್, ಧರಣೇಶ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಕುಸುಮಾ, ಕಾರ್ಯದರ್ಶಿಗಳಾದ ಶೋಭಾ, ಹೇಮಲತಾ, ಮಂಡಲ ಕಾರ್ಯದರ್ಶಿ ಛಾಯಾಕೃಷ್ಣ , ಮುಖಂಡರಾದ ನಂಜುಂಡ ಮೈಮ್, ಎಸ್.ಜೆ.ಭಾಸ್ಕಾರಾಚಾರ್, ರೈತ ಮೋರ್ಚಾ ಕಾರ್ಯದರ್ಶಿ ರಾಮಚಂದ್ರ ಬ್ಯಾಡರಹಳ್ಳಿ, ಯುವ ಮುಖಂಡರಾದ ಮನುಗೌಡ , ಶ್ರವಣ್, ಮುಳ್ಳಕೆರೆ ಪ್ರಶಾಂತ್, ಆನೆಕೆರೆ ಪ್ರಸಾದ್, ಮಂಜುನಾಥ್, ವೆಂಕಟೇಶ್ ಆಚಾರ್, ಕಾರ್ಯಕರ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net