ಧರ್ಮದ ಹಾದಿಯಲ್ಲಿ ನಡೆಯಿರಿ

25Sgn01
Published on

ಶಿಗ್ಗಾಂವಿ: ನಾವು ಬದುಕಲು ಅವಕಾಶ ಮಾಡಿಕೊಟ್ಟ ಪರಮಾತ್ಮನನ್ನು ಸ್ಮರಿಸುವ ಕೆಲಸಗಳಾಗಬೇಕು. ಹಿರಿಯರ ಸ್ಮರಣೆಯೊಂದಿಗೆ ಅವರು ಹಾಕಿಕೊಟ್ಟ ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಹಿರೇಮಣಕಟ್ಟಿ ಮುರಘೕಂದ್ರಮಠದ ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ತಾಲೂಕಿನ ಹಿರೇಮಣಕಟ್ಟಿ ಗ್ರಾಮದಲ್ಲಿ ಮುರಘೕಂದ್ರಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ವೀರಭದ್ರೇಶ್ವರ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಜಾನಪದ ಉತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವೇ.ಮೂ. ಶಿವಯೋಗಿ ಚರಂತಿಮಠ ಮಾತನಾಡಿ, ಕಲೆಯನ್ನು ಪ್ರೋತ್ಸಾಹಿಸುವಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಪತ್ರಕರ್ತ ವೀರೇಶ ದಾನಿ ಮಾತನಾಡಿದರು. ಬಸವರಾಜ ವಾಲಿಕಾರ, ಜೋಡಿ ಬಸವೇಶ್ವರ ಕಲಾ ತಂಡ ಚಿಕ್ಕಮಣಕಟ್ಟಿ ಹಾಗೂ ವಿವಿಧ ಕಲಾ ತಂಡಗಳಿಂದ ನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮ ಜರುಗಿದವು.

ವೀರಭದ್ರೇಶ್ವರ ಯುವಕ ಸಂಘದ ಅಧ್ಯಕ್ಷ ಮೃತ್ಯುಂಜಯ ಬಾಗಲಕೋಟಿಮಠ ಅಧ್ಯಕ್ಷತೆ ವಹಿಸಿದ್ದರು. ಬಸವನಗೌಡ ಪಾಟೀಲ, ಬಿ.ಬಿ. ಸೊರಟೂರ, ವಿ.ಸಿ. ಪಾಟೀಲ, ಭೀಮಪ್ಪ ತೋಟದ, ರಾಮನಗೌಡ ಪಾಟೀಲ, ಮಲ್ಲೇಶಪ್ಪ ಹಡಪದ, ಫಕೀರಪ್ಪ ಹರಿಜನ, ಅಲ್ಲಾಸಾಬ ಹಂಚಿನಾಳ, ಪ್ರಕಾಶಗೌಡ ಕುಲಕರ್ಣಿ, ಮಂಜುನಾಥ ಪಾಟೀಲ, ವೀರನಗೌಡ ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net