

ಔರಾದ್: ದ್ವೇಷ, ಅಸೂಯೆ, ಬದಿಗಿಟ್ಟು ನಾಡು ಕಟ್ಟುವ ಕೆಲಸ ಮಾಡಬೇಕು ಎಂದು ಬಿದ್ರಿ ಕಲೆಯ ಕುಶಲಕರ್ಮಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಷಾ ರಶೀದ್ ಅಹಮದ್ ಖಾದ್ರಿ ಹೇಳಿದರು.
ಎಕಲಾರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ರಾಜ್ಯೋತ್ಸವದಲ್ಲಿ ಮಾತನಾಡಿ, ಅಸೂಯೆಯಿಂದ ವರ್ತಿಸುವವರು ವಿವೇಚನೆ ಕಳೆದುಕೊಂಡು ಕೆಟ್ಟ ಆಲೋಚನೆ ಮಾಡುತ್ತಾರೆ. ಶಿಕ್ಷಣ ಬೆಳೆದಂತೆ ಅಕ್ಷರಸ್ಥರಲ್ಲಿ ಅಸೂಯೆ, ಸಂಶಯ ಹೆಚ್ಚಿಸುತ್ತಿರುವುದು ದುರಾದೃಷ್ಟ. ಖಾಸಗಿ ಶಾಲೆಗಳಿಗೂ ಮೀರಿಸುವಂತೆ ಎಕಲಾರದ ಶಾಲೆ ಸುಂದರಗೊಳಿಸಿದ್ದು ಶ್ಲಾಘನೀಯ ಎಂದರು.
ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಗೊಂಡ ಬಾಬುರಾವ, ಪಿಡಿಒ ವಿಜಯಲಕ್ಷ್ಮೀ ಪಾಟೀಲ್, ನಿವೃತ್ತ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾವೆ, ಗಜಾನನ ಮಳ್ಳಾ ಮಾತನಾಡಿದರು. ಸಾಧಕರಾದ ಗೊಂಡ ಬಾಬುರಾವ, ಪ್ರೌಢ ಶಾಲೆ ಮುಖ್ಯಶಿಕ್ಷಕ ಜ್ಞಾನದೇವ ಪಾಂಚಾಳರನ್ನು, ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಪಡೆದ ಆದಿತ್ಯ ಮಜಗೆ, ಶಿವಕರ್ಣಾ ಬಿರಾದಾರ ಹಾಗೂ ವೈಷ್ಣವಿ ಪಾಟೀಲ್‌ರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷೆ ಸುನೀತಾ ಮಣಿಗೆಂಪುರೆ, ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಮಣಿಗೆಂಪುರೆ, ಮುಖ್ಯಶಿಕ್ಷಕ ಪ್ರಭು ಬಾಳೂರೆ, ಬಕ್ಕಪ್ಪ, ಗಣಪತರಾವ ಜೀರ್ಗೆ, ರಾಜಕುಮಾರ ಮೇತ್ರೆ, ಗಣಪತಿ ಕಾವೇರಿ, ಕಲ್ಲಪ್ಪ ಮುದಾಳೆ, ಈರಪ್ಪ ವಡೆಯರ್, ರಾಮಚಂದ್ರ, ರಮೇಶ ಅಡಸಾರೆ, ಸಂತೋಷ ಕೋಳಿ, ಶಿಕ್ಷಕರಾದ ಬಾಲಾಜಿ ಅಮರವಾಡಿ, ವೀರಶೆಟ್ಟಿ ಗಾದಗೆ, ಜಯಸಿಂಗ್ ಠಾಕೂರ, ಅಂಕುಶ ಪಾಟೀಲ್, ಕಿರಣ ಹಿಪ್ಪಳಗಾವೆ, ರೂಪಾ, ಸಿದ್ದೇಶ್ವರಿ ಇತರರಿದ್ದರು.