ದೇಶಾಭಿಮಾನ ಕಲಿಸುತ್ತೆ

8bgkp01 Scout and Gaids
Published on

ಬಾಗಲಕೋಟೆ: ಸ್ಕೌಟ್ ಗೈಡ್ ಒಂದು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ದೇಶಾಭಿಮಾನ ಮೈಗೂಡಿಸುವಲ್ಲಿ ಸಂಸ್ಥೆಯ ಕಾರ್ಯ ಬಹುಮುಖ್ಯವಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಸ್ಕೌಟ್ ಗೈಡ್ ಸಂಯೋಜಕ ಪಿ.ಕೆ .ಚೌಗುಲೆ ಹೇಳಿದರು.

ನಗರದ ಪ್ರತಿಷ್ಠಿತ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ಕೌಟ್ ಗೈಡ್ ಘಟಕದ ವತಿಯಿಂದ ಸ್ಕೌಟ್ ಗೈಡ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

ಸ್ಕೌಟ್ ಗೈಡ್ ಸಂಸ್ಥಾಪಕ ಬೇಡನ್ ಪೋವೆಲ್ ಅವರ ಸೇವೆ ಹಾಗೂ ಸ್ಕೌಟ್ ಗೈಡ್‌ನ ನಡೆದು ಬಂದ ಪರಂಪರೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಇದೊಂದು ಸ್ವಯಂ ಸೇವಕ ಸಂಸ್ಥೆಯಾಗಿದ್ದು, ಯುವಕರಲ್ಲಿ ಶಿಸ್ತು ನಿಯಮ ಹಾಗೂ ದೇಶಾಭಿಮಾನವನ್ನು ಮೂಡಿಸುವಂತ ಕಾರ್ಯ ಮಾಡುತ್ತಿದೆ. ವಿದ್ಯಾರ್ಥಿಗಳು ಈ ಘಟಕದ ಸದುಪಯೋಗ ಪಡೆದುಕೊಂಡು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜೆ. ಒಡೆಯರ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು ಯುವಜನತೆ ಸಮಾಜಮುಖಿ ಕಾರ್ಯ ಮಾಡುವುದರಿಂದ ಸಾಧ್ಯವಾಗುತ್ತದೆ. ದೇಶಪ್ರೇಮ ದೇಶಸೇವೆ ಮಾಡುವುದು ಪ್ರತಿಯೊಬ್ಬ ಪ್ರಜೆಗಳ ಕರ್ತವ್ಯ ಎಂದು ತಿಳಿಸಿದರು.

ಉಪಸ್ಥಿತರಿದ್ದ ಸ್ಕೌಟ್ ಗೈಡ್ ರೇಂಜರ್ ಆಫೀಸರ್ ವಂದನಾ ಸತ್ತಿಗೇರಿ ಸ್ವಾಗತಿಸಿದರು. ಪ್ರಿಯಾ ಆಸಂಗಿ ನಿರೂಪಿಸಿದರು. ಸ್ಪೂರ್ತಿ ತುರುಡುಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net