ದೇಶಪ್ರೇಮವೇ ಭಾರತ ಸೇವಾದಳ ಧ್ಯೇಯ

SHASHIL G NAMOSHI
Published on

ಕಲಬುರಗಿ: ಭಾರತ ಸೇವಾದಳ ಸಂಸ್ಥೆ ವಿದ್ಯಾರ್ಥಿಗಳಲ್ಲಿ ಶಿಸ್ತು, ದೇಶಪ್ರೇಮ, ಸಹೋದರತೆ ಹಾಗೂ ಭಾವೈಕ್ಯದ ಜಾಗೃತಿ ಮೂಡಿಸುತ್ತಿದೆ. ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಅಪಾರ ಕೊಡುಗೆ ನೀಡಿದೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಶಶೀಲ್ ನಮೋಶಿ ಹೇಳಿದರು.
ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಎಸ್.ವಿ.ಮಲ್ಲಾಪುರ ಮೆಕಾನಿಕಲ್​ ವಿಭಾಗದಲ್ಲಿ ಭಾರತ ಸೇವಾದಳ ಸಹಯೋಗದಡಿ ಸೋಮವಾರ ಏರ್ಪಡಿಸಿದ್ದ ರಾಷ್ಟçಧ್ವಜ, ರಾಷ್ಟçಗೀತೆ ಕುರಿತ ಮಾಹಿತಿ ಶಿಬಿರದಲ್ಲಿ ಮಾತನಾಡಿದ ಅವರು, ದೇಶ ಸೇವೆಗಾಗಿ ಉದಯಿಸಿರುವ ಸೇವಾದಳ ಶಿಸ್ತು, ತಾಳ್ಮೆ, ಸೇವಾ ಮನೋಭಾವದಿಂದ ಬಲಿಷ್ಠ ಸಂಸ್ಥೆಯಾಗಿ ಬೆಳೆದಿದೆ. ಇಂದಿನ ಮಕ್ಕಳು ಅತ್ಯುತ್ತಮ ಕಲಿಕೆ ಮೂಲಕ ಆಧುನಿಕತೆ ಮೈಗೂಡಿಸಿಕೊಂಡಿz್ದÁರೆ. ಕೆಲ ದುಶ್ಚಟಗಳ ಮೂಲಕ ಭವಿಷ್ಯಕ್ಕೆ ಸಂಚಕಾರ ತಂದುಕೊಳ್ಳುತ್ತಿz್ದÁರೆ. ಸೇವಾದಳÀ ಮೂಲಕ ದೇಶಪ್ರೇಮ, ಭಕ್ತಿ ಸೇವೆ ಮನೋಭಾವ ಮೂಡಿಸಿದರೆ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು.
ಸೇವಾದಳಕ್ಕೆ ಶಿP್ಷÀಕರೇ ಅಡಿಗಲ್ಲು. ಅದನ್ನು ಉಳಿಸಿ ಬೆಳೆಸುವುದು ಅವರಿಂದ ಮಾತ್ರ ಸಾಧ್ಯ. ಶಿP್ಷÀಕ ವೃಂದ ಆ ಹೊಣೆಗಾರಿಕೆ ಹೊರಬೇಕು. ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಸೇವಾದಳ ಶಾಖೆಗಳನ್ನು ಎಲ್ಲ ಶಾಲೆಗಳಲ್ಲೂ ತೆರೆದು ಯುವ ಪೀಳಿಗೆಯಲ್ಲಿ ದೇಶಭಕ್ತಿ. ರಾಪ್ಟçಪ್ರೇಮ ಬಿತ್ತಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಂಚಾಲಕ ಲಕ್ಷö್ಮಣ ಅವಟೆ ಮಾತನಾಡಿದರು. ಸೇವಾದಳ ನಡೆದು ಬಂದ ದಾರಿ ಬಗ್ಗೆ ಜಿ¯್ಲÁ ಕಾರ್ಯದರ್ಶಿ ಸುರೇಶ ಬಡಿಗೇರ ಬೆಳಕು ಚೆಲ್ಲಿದರು. ಪಿಡಿಎ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಆರ್. ಪಾಟೀಲï, ಸೇವಾದಳ ತಾಲೂಕು ಕಾರ್ಯದರ್ಶಿ ಗುರುಲಿಂಗಯ್ಯ ಮಠ, ಉಪ ಪ್ರಾಚಾರ್ಯೆ ಡಾ.ಭಾರತಿ ಹರಸೂರ, ಡಾ.ಎಸ್.ಆರ್. ಹೊಟ್ಟಿ ಇದ್ದರು. ಕ್ರೀಡಾ ನಿರ್ದೇಶಕ ಪ್ರಭುಲಿಂಗ ಪಾಟೀಲï ವಂದಿಸಿದರು. ಜಿ¯್ಲÁ ಸಂಘಟಕ ಚಂದ್ರಶೇಖರ ಜಮಾದಾರ ರಾಷ್ಟçಧ್ವಜ, ರಾಷ್ಟçಗೀತೆ ಕುರಿತು ಸಂಸ್ಥೆಯ ಎಲ್ಲ ಕಾಲೇಜು ಮುಖ್ಯಸ್ಥರು ಹಾಗೂ ಉಪನ್ಯಾಸಕರಿಗೆ ತರಬೇತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net