

ಬಾಗಲಕೋಟೆ: ಕರ್ನಾಟಕ ಪೊಲೀಸ ಬಗ್ಗೆ ದೇಶದಲ್ಲಿ ವಿಶೇಷ ಸ್ಥಾನವಾಗಿದೆ. ದೇಶದಲ್ಲೇ ನಂಬರ್ ೧ ಸ್ಥಾನವನ್ನು ಪಡೆದಿದೆ. ಸೈಬರ ಕ್ರೆÊಯಂ ವಿಷಯದಲ್ಲಿ ಮೊದಲು ಪೊಲೀಸ್ ಠಾಣೆ ಸ್ಥಾಪಿಸಿ ಸೈಬರ ಅಪರಾಧಗಳನ್ನು ತಡೆಗಟ್ಟುವ ಕೆಲಸ ಮಾಡಿದ್ದು ಕರ್ನಾಟಕ ಪೊಲೀಸ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ನವನಗರದ ಜಿಲ್ಲಾ ಸಶಸö ಮೀಸಲು ಪಡೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ಇಲಾಖೆಯು ನಿರ್ಮಿಸಿರುವ ಕೌಶಲ ಅಭಿವೃದ್ಧಿ ಕೇಂದ್ರ ಹಾಗೂ ಧಾತ್ರಿ ಮಂಗಳ ಭವನ, ಉತ್ಕೃರ್ಷ ಪೊಲೀಸ ನಿವಾಸ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
೨೦೧೫ ನಾನೇ ಗೃಹ ಸಚಿವ ಇದ್ದಾಗ ಸೈಬಬರ ಕೇಂದ್ರವನ್ನು ಸಿಒಡಿ ಕಚೇರಿಯಲ್ಲಿ ಸ್ಥಾಪಿಸಲಾಯಿತು. ಆ ಸಂದರ್ಭದಲ್ಲಿ ಇನೋಸಿಸ್ ೨೦ ಕೋಟಿ ರೂ. ಅನುದಾನ ನೀಡಿ ಸೈಬರಗೆ ಸಂಬAಽಸಿದAತೆ ಸಾಪ್ಟವೇರ್ ಸಿದ್ಧಪಡಿಸಿ ನೀಡಿತು. ಕ್ರೆÊಯಂ ಸಂಖ್ಯೆ ಕಡಿಮೆ ಮಾಡಲು ಪೊಲೀಸ್ ಇಲಾಖೆ ಸಾಕಷ್ಟು ಶ್ರಮ ಪಡುತ್ತಿದೆ. ಹಗಲು, ರಾತ್ರಿ ಎನ್ನದೇ ಪೊಲೀಸ್ ಸಿಬ್ಬಂದಿ ಸೇವೆ ಮಾಡುತ್ತಿದ್ದಾರೆ. ಈ ನಡುವೇ ಟೀಕೆ, ಟಿಪ್ಪಣಿಗಳು ಬರುತ್ತವೆ. ಆದರು ವಿಶ್ವಾಸ ಉಳಿಸಿಕೊಳ್ಳಲು ಪೊಲೀಸ್ ಇಲಾಖೆ ಕೆಲಸ ಶ್ಲಾಘನೀಯ. ರಾಷ್ಟçದಲ್ಲಿ ಕರ್ನಾಟಕ ಪೊಲೀಸ್ ಕಾರ್ಯ ಗೌರವಕ್ಕೆ ಪಾತ್ರವಾಗಿದೆ ಎಂದರು.
ಪ್ರತಿ ಪೊಲೀಸ್ ಕುಟುಂಬಕ್ಕೆ ಸುಸಜ್ಜಿತವಾದ ಗೃಹ ನಿರ್ಮಾಣ ಮಾಡುವ ಕಾರ್ಯ ಕೈಗೊಂಡಿದ್ದು, ಈಗಾಗಲೇ ಶೇ.೪೦ ರಷ್ಟು ಮಾತ್ರ ಆಗಿದ್ದು, ಇನ್ನು ಶೇ.೬೦ ನಿರ್ಮಾಣ ಮಾಡಲು ಮುಖ್ಯಮಂತ್ರಿಗಳಲ್ಲಿ ಕೇಳಿದಾಗ ಸಕಾರಾತ್ಮಕವಾಗಿ ಸ್ಪಂಽಸಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ನಮ್ಮ ಉದ್ದೇಶ ಪ್ರತಿಯೊಬ್ಬ ಪೊಲೀಸರಿಗೂ ಮನೆ ಇರಬೇಕು. ಅವರಿಗೆ ವಸತಿ ಗೃಹ ನಿರ್ಮಿಸುವವರೆಗೂ ಇದು ಮುಂದುವರೆಯಲಿದೆ. ಈ ಹಿಂದೆ ಆರೋಗ್ಯ ತಪಾಸಣೆ ನೀಡಲಾಗುತ್ತಿದ್ದ ೧೦೦೦ ರೂ.ಗಳಿಂದ ೧೫೦೦ ರೂ.ಗಳಿಗೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಹಾಗೂ ಜಿಲ್ಲೆಗಳಲ್ಲಿ ಅಪರಾಧ ಸಂಖ್ಯೆಗಳನ್ನು ಸರಾಸರಿ ಗಮನಿಸಿದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹತೋಟಿಯಲ್ಲಿದೆ. ಹಾಗೆಂದ ಮಾತ್ರಕ್ಕೆ ಅಪರಾಧಗಳು ನಡೆದಿಲ್ಲ ಎನ್ನುವಂತಿಲ್ಲ. ಬೇರೆ ಬೇರೆ ಕಾರಣಗಳಿಂದ ಪ್ರಕರಣಗಳು ನಡೆಯುತ್ತಿವೆಯಾದರೂ ಮೊದಲಿಗಿಂತ ಕಡಿಮೆ ಪ್ರಮಾಣದಲ್ಲಿವೆ ಎಂದು ತಿಳಿಸಿದರು.
ಪೊಲೀಸ್ ಇಲಾಖೆ ಸುಭದ್ರಗೊಳಿಸಲು ಹೊಸ ತಂತ್ರಜ್ಞಾನಗಳನ್ನು ಹಾಗೂ ಆವಿಷ್ಕಾರಗಳನ್ನು ಹೊರತರಲಾಗುತ್ತಿದ್ದು, ಪ್ರತಿ ಜಿಲ್ಲೆಗೊಂದು ಸೈಬರ್ ಠಾಣೆ ತೆಗೆಯಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಈಚೆಗೆ ಆಗುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಕಾರ್ಯ ಮಾಡಲಾಗುತ್ತಿದೆ. ಅಲ್ಲದೇ ಪ್ರತಿ ತಾಲೂಕು ಕೇಂದ್ರದಲ್ಲಿ ಪೊಲೀಸ್ ವಸತಿ ಗೃಹವನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ. ನಮ್ಮ ಅಽಕಾರ ಅವಽಯಲ್ಲಿ ಮೂರು ಬಾರಿ ಗೃಹಮಂತ್ರಿಯಾಗಿ ಮಾಡಿದ ಕಾರ್ಯಗಳು ದೇಶದಲ್ಲಿ ಹೆಸರು ಮಾಡಿದ್ದು, ದೇಶದಲ್ಲಿ ಕರ್ನಾಟಕ ಪೊಲೀಸ್ ಅಗ್ರಸ್ಥಾನದಲ್ಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಪೊಲೀಸ್ ಇಲಾಖೆಯು ಸಾರ್ವಜನಿಕರ ಕ್ಷೇತ್ರದಲ್ಲಿ ಭಯ ಹುಟ್ಟಿಸುವ ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಎರಡು ಕಾರ್ಯಗಳನ್ನು ವಾತಾವರಣಕ್ಕೆ ತಕ್ಕಂತೆ ಕೆಲಸ ಮಾಡಬೇಕಾಗುತ್ತದೆ. ಕೇವಲ ಜನಸ್ನೇಹಿ ಪೊಲೀಸ್ ಕಾರ್ಯಕ್ಕೆ ಎಚ್ಚರಿಕೆಯ ಕೊರತೆ ಕಂಡುಬರುತ್ತದೆ. ಆದ ಕಾರಣ ಜನಸ್ನೇಹಿ ಜೊತೆಗೆ ಅಪರಾಽಗಳಿಗೆ ಹಾಗೂ ಅಪರಾಧ ಮಾಡಬಾರದೆಂಬ ಸಂದೇಶ ಕೊಡುವ ಭಯ ಹುಟ್ಟಿಸುವ ಕಾರ್ಯವು ಸಹ ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ ಎಂದರು.
ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಬಾಗಲಕೋಟೆ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಶಾಂತಿ ನೆಲಸಲು ಕಾರಣರಾಗಿದ್ದಾರೆ. ಸಮಾಜವೆಂದ ಮೇಲೆ ಕಷ್ಟ ಹಾಗೂ ಸುಖ ಬರುವುದು ಸಹಜ. ಅಪರಾಧ ಕಾರ್ಯ ನಡೆದಾಗ ಪೊಲೀಸ್ ಗುರಿಯಾಗಿರುಸುವು, ಒಳ್ಳೇಯ ಕಾರ್ಯ ಮಾಡಿದಾಗ ತಾವೇ ಮಾಡಿದ್ದೇವೆ ಎಂಬುವವರ ಮಧ್ಯ ಪೊಲೀಸ್ ಕಾರ್ಯ ಇದೆ ಎಂಬುದನ್ನು ಮರೆಯಬಾರದು ಎಂದರು.
ಬಿಟಿಡಿಎ ಅಧ್ಯಕ್ಷ, ಎಚ್.ವಾಯ್.ಮೇಟಿ ಮಾತನಾಡಿ ಮಂಗಳ ಭವನವನ್ನು ಕೇವಲ ಪೊಲೀಸರಿಗೆ ಅಲ್ಲದೇ ಸಾರ್ವಜನಿಕರಿಗು ಕೂಡಾ ಅನುಕೂಲ ಮಾಡಿರುವುದು ಬಾಗಲಕೋಟೆ ಜಿಲ್ಲಾ ಪೊಲೀಸ್ ಜನಪರ ಕಾರ್ಯವಾಗಿದೆ. ಕಾರ್ಯಕ್ರಮದ ಪೊರ್ವದಲ್ಲಿ ಮಂಗಲ ಭವನದ ಆವರಣದಲ್ಲಿ ಗಿಡಗಳನ್ನು ಸಹ ನೆಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಹನಮಂತ ನಿರಾಣಿ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ನಗರಸಭೆ ಅಧ್ಯಕ್ಷೆ ಸವಿತಾ ಲೇಂಕನ್ನವರ, ಉಪಾಧ್ಯಕ್ಷೆ ಶೋಭಾ ರಾವ, ಸಭಾಪತಿ ಯಲ್ಲಪ್ಪ ನಾರಾಯಣಿ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಎಸ್.ಜಿ.ನಂಜಯ್ಯನಮಠ, ಐಜಿಪಿ ಚೇತನಸಿಂಗ್ ರಾಠೋಡ, ಜಿಲ್ಲಾಽಕಾರಿ ಸಂಗಪ್ಪ ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಪ್ರಸನ್ನ ದೇಸಾಯಿ, ಮಹಾಂತೇಶ್ವರ ಜಿದ್ದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.