ದೇಶದಲ್ಲಿ ರಕ್ತದ ಕೊರತೆ ಹೆಚ್ಚಳ

SBVV
Published on

ಕಲಬುರಗಿ: ಭಾರತದಲ್ಲಿ ತುರ್ತು ಸಂದರ್ಭಗಳಲ್ಲಿ ರಕ್ತದ ಕೊರತೆಯಿಂದ ನಿತ್ಯ ೧೨ ಸಾವಿರಕ್ಕೂ ಹೆಚ್ಚು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ದೇಶದ ಬ್ಲಡ್‌ಬ್ಯಾಂಕ್, ಆಸ್ಪತ್ರೆಗಳಲ್ಲಿ ರಕ್ತದ ಬೇಡಿಕೆ ಮತ್ತು ಪೂರೈಕೆಯ ನಡುವೆ ಬಹುದೊಡ್ಡ ಅಂತರವಿದೆ ಎಂದು ಚಿರಾಯು ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ ದೋಶೆಟ್ಟಿ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಂಗಣದಲ್ಲಿ ವಿಶ್ವ ರಕ್ತದಾನಿಗಳ ದಿನ ನಿಮಿತ್ತ ರಕ್ತದಾನ ಜಾಗೃತಿ ಕುರಿತು ಮಂಗಳವಾರ ಏರ್ಪಡಿಸಿದ್ದ ಉಪನ್ಯಾಸ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ರಕ್ತದ ಕೊರತೆ ತೀವ್ರವಾಗಿದೆ. ನಿತ್ಯ ೧.೪೬ ಕೋಟಿ ಯೂನಿಟ್ ರಕ್ತದ ಬೇಡಿಕೆಗೆ ಬ್ಲಡ್‌ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ಲಭ್ಯತೆÄ ಕೇವಲ ೧.೨೫ ಕೋಟಿ ಯೂನಿಟ್. ನಿತ್ಯ ಸುಮಾರು ೧೯ ಲಕ್ಷ ಯೂನಿಟ್ ಕೊರತೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಕಾಲಕ್ಕೆ ರಕ್ತ ಪಡೆಯುವಲ್ಲಿ ಆರೋಗ್ಯ ವೃತ್ತಿಪರರು ಹಾಗೂ ಕಾರ್ಯಕರ್ತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪೈಕಿ ರಕ್ತದಾನದ ಬಗ್ಗೆ ಅರಿವಿನ ಕೊರತೆಯಿದ್ದು, ಅಂದಾಜಿನAತೆ ಅರ್ಹರಲ್ಲಿ ಶೇ.೯೦ ಜನ ರಕ್ತದಾನ ಮಾಡುವುದಿಲ್ಲ. ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು, ಆರು ತಿಂಗಳಲ್ಲಿ ಶಸ್ತçಚಿಕಿತ್ಸೆಗೆ ಒಳಗಾದವರು, ಅನಿಯಂತ್ರಿತ ಅಧಿಕ ರಕ್ತದೊತ್ತಡ ಹೊಂದಿರುವವರು ಮತ್ತು ಇನ್ಸುಲಿನ್ ಅಗತ್ಯವಿರುವ ಮಧುಮೇಹಿಗಳು ಹಾಗೂ ಅನಿಯಂತ್ರಿತ ಬಿಪಿ ಇದ್ದವರು ರಕ್ತದಾನಕ್ಕೆ ಅರ್ಹರಲ್ಲ. ನಿಯಂತ್ರಿತ ರಕ್ತದೊತ್ತಡ ಹಾಗೂ ಮಧುಮೇಹಿಗಳು ಕೂಡ ರಕ್ತದಾನ ಮಾಡಬಹುದು ಎಂದು ಹೇಳಿದರು.
ನಿಯಮಿತ ರಕ್ತದಾನದಿಂದ ಕೊಲೆಸ್ಟಾçಲ್ ಕಡಿಮೆ ಆಗಲಿದೆ. ಹೃದಯಾಘಾತ, ಪಾರ್ಶ್ವವಾಯು ಸಂಭವಿಸುವ ಸಾಧ್ಯತೆಯೂ ಕಮ್ಮಿ. ಅಲ್ಪಾವಧಿಯ ಕ್ಯಾಲೊರಿ ಇರುವವರು ಮತ್ತು ದೀರ್ಘಾವಧಿಯ ದೇಹ ತೂಕದಲ್ಲಿ ಕಡಿತ ಸಾಧಿಸಬಹುದು ಎಂದರು.
ಆರೋಗ್ಯವAತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾದರೂ, ಅಪರೂಪದ ರಕ್ತದ ಗುಂಪು ಹೊಂದಿರುವವರು ಶಿಬಿರಗಳಲ್ಲಿ ರಕ್ತದಾನ ಮಾಡುವುದನ್ನು ತಪ್ಪಿಸಬೇಕು. ಬ್ಲಡ್‌ಬ್ಯಾಂಕ್ ಮತ್ತು ಆಸ್ಪತ್ರೆಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಡಾ.ದೋಶೆಟ್ಟಿ ಸಲಹೆ ನೀಡಿದರು.
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಇತರರಿದ್ದರು. ಶರಣಬಸವ ವಿಶ್ವವಿದ್ಯಾಲಯ ಮತ್ತು ಚಿರಾಯು ಆಸ್ಪತ್ರೆಯ ಜೀವನ್ ಆಧಾರ್ ರಕ್ತ ಕೇಂದ್ರ ಸಹಯೋಗದಡಿ ವಿವಿ ಆವರಣದಲ್ಲಿ ರಕ್ತದಾನ ಶಿಬಿರ ಬುಧವಾರ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net