ದೇಶದ ಸಂಸ್ಕೃತಿ-ಪರಂಪರೆ ಉಳಿಸೋಣ

0909Klb09
Published on

ಕಲಬುರಗಿ: ಭಾರತ ಕೃಷಿ ಪ್ರಧಾನ, ಶ್ರಮ ಸಂಸ್ಕೃತಿಯ ಒಕ್ಕಲುತನದ ಪರಂಪರೆ ಹೊಂದಿದ ದೇಶ. ನಮ್ಮ ಹಬ್ಬ ಉತ್ಸವದಂಥ ಆಚರಣೆಗಳು ದೇಶದ ಸಂಸ್ಕೃತಿಯ ಸಂಕೇತವಾಗಿದ್ದರೂ ವಿದೇಶಿ ಅನುಕರಣೆಯಿಂದ ಮರೆಯಾಗುತ್ತಿವೆ. ಅದನ್ನು ಉಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಜ್ಞಾನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಂಗಮೇಶ್ವರ ಸರಡಗಿ ಹೇಳಿದರು.
ಆಳಂದ ರಸ್ತೆ ಸಂತೋಷ ಕಾಲನಿಯ ಕೆಎಚ್‌ಬಿ ಗ್ರೀನ್ ಪಾರ್ಕ್ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಗ್ರಾಮೀಣ ಸೊಗಡು ವಿಶೇಷ ಕಾರ್ಯಕ್ರಮ, ಕೃಷಿ, ಗೃಹ ಸಲಕರಣೆ, ವಸ್ತು ಪ್ರದರ್ಶನದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಜಾನಪದ ಪರಿಷತ್ ಉತ್ತರ ವಲಯ ಅಧ್ಯಕ್ಷ ಹಣಮಂತರಾಯ ಅಟ್ಟೂರ ಮಾತನಾಡಿ, ಕೃಷಿ ಸಂಸ್ಕೃತಿ ಬಿಂಬಿಸುವ ಖಣ, ಹಂತಿ, ರಾಶಿ, ಲಕ್ಷಿö್ಮÃ ಪೂಜೆ, ಪಾಂಡವರ ಪೂಜೆ, ಅಂಬಲಿ ಪೂಜೆ, ಜಾನಪದ ಸಂಸ್ಕೃತಿ ಕುಟ್ಟುವುದು, ಬೀಸುವುದು, ನೃತ್ಯ, ಕೋಲಾಟ ಸೇರಿ ಹಲವು ಪದ್ಧತಿ ಮರೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಪ್ರಮುಖರಾದ ಧರ್ಮರಾಜ ಒಡೆಯರ್, ಮಹಾನಂದ ಒಡೆಯರ್, ಬಾಬುರಾವ ಗೋವಿನ್, ಎಚ್.ಬಿ. ಪಾಟೀಲ್, ಬಾಲಕೃಷ್ಣ ಕುಲಕರ್ಣಿ, ವೀರೇಶ ಬೋಳಶೆಟ್ಟಿ, ಬಸವರಾಜ ಹೆಳವರ, ಮಲ್ಲಣ್ಣ ಮಲ್ಲೇದ್, ಶಿವಯೋಗಪ್ಪ ಬಿರಾದಾರ, ಮಲ್ಲಿನಾಥ ಮುನ್ನಳ್ಳಿ, ಶ್ರೀದೇವಿ ಅಟ್ಟೂರ, ಮಂಜುಳಾ ಬುಜ್ಜಿ, ಸಂಸ್ಕೃತಿ ಬುಜ್ಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net