

ಬಾಗಲಕೋಟೆ: ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಬಿತ್ತಿದ ಗ್ಯಾರಂಟಿ ಟೊಳ್ಳು ಬೀಜಗಳ ಪರಿಣಾಮ ಬಿಜೆಪಿ ಸೋಲಿಗೆ ಕಾರಣವಾಯಿತು. ದೇಶದ ಭವಿಷ್ಯಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧರಾಗಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಕಾರ್ಯಕರ್ತರಿಗೆ ಕರೆ ನೀಡಿದರು.
ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಮಂಗಳವಾರ ಬಿಜೆಪಿ ನಗರ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಪಕ್ಷದ ಆತ್ಮಾವಲೋಕನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನ ಸಭಾ ಚುನಾವಣೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ಸ ಬಿತ್ತಿದ ಗ್ಯಾರಂಟಿ ಟೊಳ್ಳು ಬೀಜಗಳ ಪರಿಣಾಮ ಬಿಜೆಪಿ ಸೋಲಿಗೆ ಕಾರವಾಯಿತು. ಗೆದ್ದ ಮೆಲೆ ಗ್ಯಾರಂಟಿ ಷರತ್ತುಗಳು ಕಾಂಗ್ರೆಸ್ಸಿನ ಬಣ್ಣವನ್ನು ಬಯಲುಮಾಡುತ್ತಿವೆ. ಇವರ ವರ್ತನೆಗೆ ಜನರು ಆಕ್ರೋಶಗೊಂಡಿದ್ದಾರೆ. ಬರುವ ದಿನಗಳಲ್ಲಿ ಬಿಜೆಪಿಗೆ ಮತ್ತೆ ಉತ್ತಮ ಭವಿಷ್ಯವಿದೆ. ಕಾರ್ಯಕರ್ತರು ಹತಾಶರಾಗದೆ ಧೈರ್ಯವಾಗಿ ಮುಂದೆ ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಲೋಕಸಭೆ ಚುನಾವಣೆಗಳಿಗೆ ಸನ್ನದ್ದರಾಗಬೇಕು ಎಂದು ಹೇಳಿದರು.
ಬಾಗಲಕೋಟೆಯಲ್ಲಿ ಎಲ್ಲ ಬಿಜೆಪಿ ಕಾರ್ಯಕರ್ತರು, ಸಂಘ ಪರಿವಾರ ಸದಸ್ಯರು, ನಗರಸಭೆ ಸದಸ್ಯರು,ಬೂತ್ ಪ್ರಮುಖರು ಸೇರಿದಂತೆ ಎಲ್ಲರೂ ಶಕ್ತಿ ಮೀರಿ ಕೇಲಸ ಮಾಡಿದ ಪರಿಣಾಮ ೭೪ ಸಾವಿರ ಮತಗಳನ್ನು ನಾವು ಪಡೆದಿದ್ದೇವೆ. ಶಾಸಕನಾಗಿ ನನ್ನ ಸೇವಾ ಅವಧಿಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ ಆತ್ಮತೃಪ್ತಿ ನನಗೆ ಇದೆ. ದೇಶದ ಉತ್ತಮ ಭವಿಷ್ಯಕ್ಕಾಗಿ ನರೇಂದ್ರ ಮೋದಿಯವರ ಸಾರಥ್ಯ ಅವಶ್ಯವಿದ್ದು, ಮುಂಬರುವ ಲೋಕಸಭಾ ಚುನಾಚಣೆಯಲ್ಲಿ ಎಲ್ಲರೂ ಕೂಡಿ ಕೆಲಸ ಮಾಡೋಣ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಪಕ್ಷದಲ್ಲಿ ಸಂಘಟನೆ ಶಕ್ತಿಯುತವಾಗಿದ್ದು ಮುಂದಿನ ಲೋಕಸಭೆಗೆ ಗಮನ ನೀಡೋಣ ಎಂದರು.
ಸಭೆಯಲ್ಲಿ ಕಾರ್ಯಕರ್ತರು ಪಕ್ಷದ ಸಂಘಟನೆ ಸೇರಿದಂತೆ ತಮ್ಮ ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿದರು. ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಉಪಾಧ್ಯಕ್ಷ ರಾಜು ರೇವಣಕರ, ನಗರ ಮಂಡಲ ಅಧ್ಯಕ್ಷ ಸದಾನಂದ ನಾರಾ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣುರ, ಕುಮಾರ ಯಳ್ಳಿಗುತ್ತಿ, ಶಿವಾನಂದ ಟವಳಿ, ಬಸವರಾಜ ಯಂಕಂಚಿ, ಬಸಬರಾಜ ಹುನಗುಂದ, ಉಮೇಶ ಹಂಚಿನಾಳ, ಗುಂಡುರಾವ ಶಿಂಧೆ, ಲಕ್ಷ್ಮೀನಾರಾಯಣ ಕಾಸಟ್, ಸಂಗಣ್ಣ ಹಡಗಲಿ, ಈರಣ್ಣ ಸರಗಣ್ಣವರ, ಶೋಭಾ ರಾವ್, ಶಿವಲೀಲಾ ಪಟ್ಡಣಶೆಟ್ಟಿ, ಪ್ರಭು ಹಡಗಲಿ ಸೇರಿದಂತೆ ಇತರರು ಇದ್ದರು.