ದೇಶದ ಪ್ರಥಮ ಮಹಿಳಾ ಹೋರಾಟಗಾರ್ತಿ ಚನ್ನಮ್ಮ

bkt-5-1
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ವಿ.ಪ ಸದಸ್ಯ ಪಿ.ಎಚ್.ಪೂಜಾರ, ಅಪರ ಜಿಲ್ಲಾಽಕಾರಿ ಮಹಾದೇವ ಮುರಗಿ, ಸಾಹಿತಿ ಡಾ.ಶಾರದಾ ಮುಳ್ಳೂರ, ಬಿಟಿಡಿಎ ಸದಸ್ಯ ಮೋಹನ ನಾಡಗೌಡ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ ಇದ್ದರು.
Published on

ಬಾಗಲಕೋಟೆ: ಕಾಕತೀಯ ಆಗರ್ಭ ಶ್ರೀಮಂತ ಮನೆತನದ ದುಳಪ್ಪ ದೇಸಾಯಿಯವರ ಮಗಳಾಗಿ ಜೀವನವೀಡಿ ಹೋರಾಟದ ಬದುಕು ಸಾಗಿಸಿದ ದೇಶದ ಪ್ರಥಮ ಮಹಿಳಾ ಹೋರಾಟಗಾರ್ತಿ ಕಿತ್ತೂರ ಚೆನ್ನಮ್ಮ ಎಂದು ಶಾಸಕ ವೀರಣ್ಣ ಚರಂತಿಮಠ ಬಣ್ಣಿಸಿದರು.
ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚನ್ನಮ್ಮ ಹೋರಾಟ ಮಾಡುತ್ತಲೇ ಜೀವಿಸಿ ಹೋರಾಟದಲ್ಲಿಯೇ ಅಂತ್ಯಗೊಂಡಿತು. ಪುರುಷ ಪ್ರಧಾನವಾದ ಅಂದಿನ ಕಾಲದಲ್ಲಿ ಓರ್ವ ಮಹಿಳೆ ತನ್ನ ಚಿಕ್ಕ ವಯಸ್ಸಿನ ಸಂಸಾರದಲ್ಲಿ ಮಗನನ್ನು ಕಳೆದುಕೊಂಡು ಕಿತ್ತೂರ ಸಂಸ್ಥಾನದ ಆಡಳಿತದ ಚುಕ್ಕಾಣಿ ಹಿಡಿದು ಬ್ರಿಟೀಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು ಎಂದರು.
ಸಂಸ್ಥಾನ ಉಳಿಸಿಕೊಳ್ಳಲು ತನ್ನ ಉಸಿರು ಇರುವವರೆಗೂ ಮಾಡಬೇಕು ಎಂಬ ಸಂಕಲ್ಪದಿಂದ ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ನಡೆಸಿದರು. ಇವರಿಗೆ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಬಂಧನವಾದ ಸುದ್ದಿ ಕೇಳಿದೊಡನೆ ಚನ್ನಮ್ಮ ಜಂಗಾಬಲ ಕುಸಿದು ಹೋಗಿತ್ತು. ಇಂತಹ ವೀರ ಮಹಿಳೆ ನಮ್ಮ ಕನ್ನಡ ನಾಡಿನವರು ಎಂಬುದು ಹೆಮ್ಮೆಯಾಗಿದ್ದು, ಮುಂದಿನ ಪೀಳಿಗೆಗೆ ಅವರ ಆದರ್ಶಗಳು ದಾರಿದೀಪವಾಗಿ ಎಂದು ತಿಳಿಸಿದರು.
ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಬ್ರಿಟೀಷರನ್ನು ದೇಶದಿಂದ ತೊಲಗಿಸಲು ಹೋರಾಟದ ಕಿಚ್ಚನ್ನು ಹಚ್ಚಿದ ಮಹಿಳೆ ವೀರರಾಣಿ ಚನ್ನಮ್ಮ. ಚಿಕ್ಕ ವಯಸ್ಸಿನಲ್ಲಿಯೇ ಹೋರಾಟ ಮಾಡಲು ಮುಂದಾಗಿದ್ದು, ಹೋರಾಟ ರಕ್ತಗತವಾಗಿತ್ತು. ರಾಜಮನೆತನದಿಂದ ಬಂದಿದ್ದರಿಂದ ಯುದ್ದ, ಶಸ್ತ್ರಾಸ್ತ್ರಗಳ ಮಾಹಿತಿ, ಸಂಘಟನೆ, ಯುದ್ದ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿದರು, ಸಾಹಿತಿ ಡಾ.ಶಾರದಾ ಮುಳ್ಳೂರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಿಟಿಡಿಎ ಸದಸ್ಯ ಮೋಹನ ನಾಡಗೌಡ, ನಗರಸಭೆ ಸದಸ್ಯ ಚನ್ನವೀರ ಅಂಗಡಿ, ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಜಿ.ಪಂ ಉಪಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಸಮುದಾಯ ಮುಖಂಡರಾದ ರವಿಕುಮಾರ ಪಟ್ಟಣದ, ಬಸವರಾಜ ರಾಜೂರ, ರಮೇಶ ಅಂಗಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net