ದೇಶದ ಅಭಿವೃದ್ಧಿಗೆ ಯುವ ಜನತೆ ಬಳಕೆಗೆ ಎನ್ನೆಸ್ಸೆಸ್ ಸ್ಥಾಪನೆ

29HDK4
Published on

ಎಚ್.ಡಿ.ಕೋಟೆ: ಯುವಶಕ್ತಿಯನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶದಿಂದ ಮಹಾತ್ಮ ಗಾಂಧಿ ಅವರು ಎನ್ನೆಸ್ಸೆಸ್ ಸ್ಥಾಪಿಸಿದರು ಎಂದು ಹಿರಿಯ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಚಿಕ್ಕಕೆಂಪೇಗೌಡ ತಿಳಿಸಿದರು.

ಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಥನ ದರ್ಜೆ ಕಾಲೇಜಿನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ಹಾಗೂ ಯೂತ್ ರೆಡ್‌ಕ್ರಾಸ್ ಘಟಕದ ಕಾರ್ಯಕ್ರಮಗಳಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಿಟೀಷರಿಂದ ರಸ ಹಿಂಡಿದ ಕಬ್ಬಿನ ಸಿಪ್ಪೆಯಂತಾಗಿದ್ದ ಭಾರತವನ್ನು ಅಭಿವೃದ್ಧಿಪಡಿಸಲು ದೇಶದ ಯುವಶಕ್ತಿ ಅವಶ್ಯ ಎಂದು ಗಾಂಧೀಜಿ ಮನಗಂಡಿದ್ದರು. ಅದರಂತೆ ರಾಷ್ಟ್ರೀಯ ಸೇವಾ ದಳವನ್ನು ಸ್ಥಾಪಿಸಿ ಯಶಸ್ಸನ್ನು ಕಂಡಿದ್ದರಲ್ಲದೆ, ಯುವಕರನ್ನು ರಾಷ್ಟ್ರಾಭಿವೃದ್ಧಿಯ ಒಂದು ಭಾಗವಾಗಿಸಿದರು ಎಂದರು.

ಭಾರತದಲ್ಲಿ 34.5 ಲಕ್ಷ ಮಂದಿ ಎನ್ನೆಸ್ಸೆಸ್ ಶಿಬಿರಾರ್ಥಿಗಳಿದ್ದು ದೇಶದ ಹಲವು ಗ್ರಾಮಗಳ ಅಭಿವೃದ್ಧಿಗೆ ನಾಂದಿಯಾಡಿದ್ದು, ಅದರಂತೆ ಹಲವು ಗ್ರಾಮಗಳು ಅಭಿವೃದ್ಧಿಯಾಗಿವೆ ಎಂದರು

ವೈದ್ಯಾಧಿಕಾರಿ ಸೋಮಣ್ಣ ಮಾತನಾಡಿ, ಇಂದಿನ ಯುವ ಜನತೆ ದೇಶ ಅಭಿವೃದ್ಧಿಗೆ ನಾಂದಿಯಾಡಬೇಕು, ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಮೊಬೈಲ್ ಗೀಳಿನಿಂದಾಗಿ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಬಕಾರಿ ಇಲಾಖೆಯ ನಿರೀಕ್ಷಕ ಶಿವರಾಜು, ಪರಿಸರ ತಜ್ಞ ದೇವದತ್ತ, ಪ್ರಾಂಶುಪಾಲ ಜೆ.ಎನ್.ವೆಂಕಟೇಶ್, ಉಪನ್ಯಾಸಕರಾದ ಭೈರೇಗೌಡ, ಕಲ್ಲೇಶ್‌ಗೌಡ, ಸಿದ್ದೇಗೌಡ, ರಾಮಚಂದ್ರ, ಮಹೇಂದ್ರ, ಚನ್ನಕೇಶವ ನಾಯಕ, ಮಂಜು, ರವೀಶ, ಪ್ರಕಾಶ್ ನಾಯಕ, ರವಿ, ಮಹದೇವ, ಮಹೇಶ್, ಸೋಮಶೇಖರ್, ಸಿದ್ದರಾಜು, ಚಿಕ್ಕದೇವಿ, ಸಂಗೀತಾ, ಅವೀನಾ, ದಿಲೀಪ್, ಚಂದನ, ಶಾಂಭವಿ, ಚಿತ್ರಾ, ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net