ದೇಶದ ಅಭಿವೃದ್ಧಿಗೆ ಕೇಂದ್ರ ಬಜೆಟ್ ನೀಲ ನಕ್ಷೆ

bkt-6-6
ಬಾಗಲಕೋಟೆ ನಗರದ ಬಿವಿವಿ ಸಂಘದ ಇನ್‌ಸ್ಟೋಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ಮಂಗಳವಾರ ಹಮ್ಮಿಕೊಂಡಿದ್ದ ಅಂತರ ಕಾಲೇಜು ವಿದ್ಯಾರ್ಥಿಗಳ ಬಜೆಟ್ ಪೆ ಚರ್ಚಾ ಸ್ಪರ್ಧೆಗೆ ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕುಮಾರ್ ಜಿಗಜಿನ್ನಿ ಚಾಲನೆ ನೀಡಿದರು. ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಪ್ರಕಾಶ್ ಕೆ ವಡವಡಗಿ, ಬಿವಿವಿ ಸಂಘದ ಸದಸ್ಯ ಬಿ.ಎಸ್.ಹಿರೆಗೌಡರ್, ಎಸ್.ಎ ನಾವಲಗಿ ಇತರರು ಇದ್ದರು.
Published on

ಬಾಗಲಕೋಟೆ: ಜನರ ಆರ್ಥಿಕ ಅಭಿವೃದ್ಧಿಯ ಮೇಲೆ ದೇಶದ ಅಭಿವೃದ್ಧಿಯು ಅವಲಂಬಿಸಿದೆ. ಕೇಂದ್ರದ ಬಜೆಟ್ ದೇಶದ ಅಭಿವೃದ್ಧಿಗೆ ನೀಲನಕ್ಷೆಯಂತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಚಾರ್ಟರ್ಡ್ ಅಕೌಂಟೆಂಟ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಾರ್ಟರ್ಡ್ ಅಕೌಂಟೆಂಟ್ ಕುಮಾರ್ ಜಿಗಜಿನ್ನಿ ಹೇಳಿದರು.

ನಗರದ ಬಿವಿವಿ ಸಂಘದ ಇನ್‌ಸ್ಟೋಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (ಬಿಮ್ಸ್) ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತರ ಕಾಲೇಜು ವಿದ್ಯಾರ್ಥಿಗಳ ಬಜೆಟ್ ಪೆ ಚರ್ಚಾ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಸುಸ್ಥಿರ ಅಭಿವೃದ್ಧಿಗೆ ಸರ್ಕಾರಗಳು ಮಂಡಿಸುವ ಬಜೆಟ್‌ಗಳು ಬಹು ಪ್ರಾಮುಖ್ಯತೆ ಪಡೆದುಕೊಂಡಿವೆ. ಬಜೆಟ್‌ನ ಆರ್ಥಿಕ ಅಭಿವೃದ್ಧಿ ಕುರಿತು ಅಂಕಿ ಅಂಶಗಳ ವಿಶ್ಲೇಷಣಾತ್ಮಕವಾಗಿ ಮನದಟ್ಟಾಗಬೇಕಿದೆ. ಬಜೆಟ್‌ನ ೧ ಅಂಶದ ಟೀಕೆಯಿಂದ ಇಡಿ ಬಜೆಟ್‌ನ್ನು ಅಲ್ಲಗಳೆಯಬಾರದು. ಬಜೆಟ್ ಮೆಲೆ ಆರೋಗ್ಯಯುತವಾದ ಪ್ರಾಮಾಣಿಕ ಗೌರವಯುತ ಚರ್ಚೆಗಳಾಗಬೇಕು ಎಂದರು.

ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಪ್ರಕಾಶ್ ಕೆ ವಡವಡಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತಿವರ್ಷ ಬಜೆಟ್ ಮಂಡನೆ ಮಾಡುವುದು ಆರ್ಥಿಕ ಅಭಿವೃದ್ಧಿ ಜೊತೆಗೆ ದಿಕ್ಸೂಚಿ ಅಡಗಿರುತ್ತದೆ. ಆರೋಗ್ಯ ಸಂಪತ್ತು, ಉತ್ತಮ ಶಿಕ್ಷಣ, ಉದ್ಯೋಗಾವಕಾಶಗಳು ಗಮನದಲ್ಲಿಟ್ಟುಕೊಂಡು ಸರ್ಕಾರ ಬಜೆಟ್ ಮಂಡಿಸುತ್ತವೆ ಎಂದು ಹೇಳಿದರು.

ಬಜೆಟ್ ಪೆ ಚರ್ಚಾ ಕುರಿತು ಸ್ಪರ್ಧೆಯಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿದ್ದರು. ಬಿವಿವಿ ಸಂಘದ ಸದಸ್ಯ ಬಿ.ಎಸ್.ಹಿರೆಗೌಡರ್, ಎಸ್.ಎ ನಾವಲಗಿ ಉಪಸ್ಥಿತರಿದ್ದರು. ಶ್ರದ್ಧಾ ಸರ್‌ದೇಸಾಯಿ ನಿರೂಪಿಸಿದರು. ರೋಹಿತ್ ಹಂಗರಗಿ ಪರಿಚಯಿಸಿದರು. ಐಶ್ವರ್ಯ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net