ದೇಶದ ಅಭಿವೃದ್ಧಿ ಹೆಬ್ಬಾಗಿಲು ಸಹಕಾರಿ ಕ್ಷೇತ್ರ

bkt-10-12
ಬಾಪೂಜಿ ಸೌಹಾರ್ದ ಸಂಘವೂ ಕೇಂದ್ರದ ಕಾನೂನು ಅಡಿಯಲ್ಲಿ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆ.ಸೊಸೈಟಿಯಾಗಿದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅವರನ್ನು ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ವಿಜಯಪುರ ಸಿದ್ದಸಿರಿ ಸಂಸ್ಥೆಯ ಅಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸನ್ಮಾನಿಸಿದರು.
Published on

ಬಾಗಲಕೋಟೆ: ಸಮಾಜದಲ್ಲಿ ಇರುವ ಎಲ್ಲ ವರ್ಗಗಳು ಇವತ್ತು ಆರ್ಥಿಕವಾಗಿ ಸದೃಢವಾಗುತ್ತಿದ್ದಾರೆ ಎಂದು ಅದಕ್ಕೆ ಕಾರಣ ಸಹಕಾರಿ ಕ್ಷೇತ್ರವಾಗಿದೆ. ರಾಷ್ಟಿçÃಯ ಬ್ಯಾಂಕ್‌ಗಳಲ್ಲಿ ಸಾಲಸಿಗದೇ ಆರ್ಥಿಕ ಸಂಕಷ್ಟದಲ್ಲಿ ಇರುವ ಎಲ್ಲರ ನೆರವಿಗೆ ಬರುವುದೇ ಈ ಸಹಕಾರಿ ಕ್ಷೇತ್ರದ ಸಂಸ್ಥೆಗಳು ಎಂದು ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಹೇಳಿದರು.

ಬಾಗಲಕೋಟೆ ನವನಗರದಲ್ಲಿ ಬಾಪೂಜಿ ಸೌಹಾರ್ದ ಸಂಘವೂ ಬಾಪೂಜಿ ಮಲ್ಟಿಸ್ಟೇಟ್ ಕ್ರೆಡಿಟ್ ಕೋ.ಆ.ಸೊಸೈಟಿ ಆಗಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟಿçÃಯ ಬ್ಯಾಂಕ್‌ಗಳು ಸುಲಭವಾಗಿ ಸಾಲ ಸೌಲಭ್ಯ ನೀಡುವುದಿಲ್ಲ. ಇಂಥ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಆರ್ಥಿಕ ಸಂಸ್ಥೆಗಳು ಇಲ್ಲದಿದ್ದರೆ ರೈತರು ಲೇವಾದೇವಿಗಾರರ ಬಳಿ ಶೇ.೩, ೪, ೫ ಮತ್ತು ಅದಕ್ಕಿಂತ ಹೆಚ್ಚಿನ ಬಡ್ಡಿಗೆ ಸಾಲ ಮಾಡಿ, ಅದನ್ನು ಮರಳಿಸಲಾಗದೇ ಹೊಲಮನೆಗಳನ್ನು ಮಾರುವ ಪರಿಸ್ಥಿತಿ ಇರುತ್ತಿತ್ತು. ಇವತ್ತು ದೇಶದ ಅಭಿವೃದ್ಧಿಯ ಹೆಬ್ಬಾಗಿಲು ಎಂದರೆ ಅದು ಸಹಕಾರಿ ಕ್ಷೇತ್ರ ಎಂದು ತಿಳಿಸಿದರು.

ರಾಷ್ಟಿçÃಕೃತ ಬ್ಯಾಂಕುಗಳಿಗೆ ಸಾಲ ಕೇಳಲು ಹೋದರೆ ಟ್ರಕ್ ಗಟ್ಟಲೇ ಕಾಗದ ಪತ್ರ ಕೇಳುತ್ತಾರೆ. ಅಷ್ಟೂ ಒದಗಿಸಿದರೆ ನಾಲ್ಕೆÊದು ತಿಂಗಳು ಬಳಿಕ ನಿಮ್ಮ ಸಾಲದ ಅರ್ಜಿ ತೀರಸ್ಕಾರವಾಗಿದೆ ಎನ್ನುತ್ತಾರೆ. ಆಗ ಅವರು ಏನು ಮಾಡಬೇಕು? ಆದರೆ, ಸಹಕಾರಿ ಸಂಸ್ಥೆಗಳು ಕಡುಬಡವರಿಂದ ಹಿಡಿದು ಕಾರ್ಖಾನೆ ಮಾಲೀಕರ ವರೆಗೂ ಎಲ್ಲರಿಗೂ ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಿ ಅವರನ್ನು ಆರ್ಥಿಕವಾಗಿ ಬೆಳೆಯಲು ಅವಕಾಶ ಕೊಟ್ಟು, ತಮ್ಮ ಸಂಸ್ಥೆಯನ್ನು ಬೆಳೆಸುತ್ತಾರೆ ಎಂದು ಹೆಮ್ಮೆಯಿಂದ ಹೇಳಿದರು.

ಇಂದು ಬಾಗಲಕೋಟೆ ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆ ಸ್ಥಾಪನೆ ಆಗಿದ್ದರಿಂದ ರೈತರು ಹೆಚ್ಚೆಚ್ಚು ಕಬ್ಬು ಬೆಳೆದು ಆರ್ಥಿಕವಾಗಿ ಸದೃಢವಾಗಿದ್ದಾರೆ. ಹಿಂದೆ ಸೈಕಲ್ ಕೂಡ ಇಲ್ಲದಿದ್ದ ಕುಟುಂಬದಲ್ಲಿ ಇವತ್ತು ಕಬ್ಬು ಬೆಳೆಗಾರರ ಮನೆಯಲ್ಲಿ ಮರ‍್ನಾಲ್ಕು ಬೈಕ್,ಒಂದೇರೆಡು ಕಾರು ಇರುವುದನ್ನು ನೋಡಿದ್ದೇವೆ. ಸಕ್ಕರೆ ಕಾರ್ಖಾನೆಗಳು ಜೀವಂತವಾಗಿ ಇರುವುದಕ್ಕೆ ಕಾರಣವೇ ಸಹಕಾರಿ ಆರ್ಥಿಕ ಸಂಸ್ಥೆಗಳು. ಕಾರ್ಖಾನೆಗಳು ಸದೃಢವಾಗಿದ್ದರಿಂದ ರೈತರು ಆರ್ಥಿಕವಾಗಿ ಬೆಳೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಸಹಕಾರಿ ಕ್ಷೇತ್ರ. ಇಂತ ಕಾರ್ಖಾನೆಗಳು, ರೈತರಿಗೆ ಸಾಲ ಕೊಡಲು ರಾಷ್ಟಿçÃಕೃತ ಬ್ಯಾಂಕ್‌ಗಳಲ್ಲಿ ಲಾರಿಗಟ್ಟಲೇ ಕಾಗದ ಪತ್ರ ಒದಗಿಸಿದರೂ ಸಾಲ ಸಿಗಲ್ಲ ಎಂದ ಅವರು, ಅದೇ ದೊಡ್ಡವರು ಎಂದು ಸಾಲ ಪಡೆದವರು, ಅಂದಾಜು ೧೦ ಲಕ್ಷ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಓಡಿ ಹೋಗಿದ್ದಾರೆ ಎಂದು ಕೆಲವರ ಹೆಸರು ಉಲ್ಲೇಖಿಸಿದರು.

ಗೌಪ್ಯಸಭೆಯೂ ಇಲ್ಲ, ಸುಡಗಾಡು ಇಲ್ಲ :

ಎಸ್.ಆರ್.ಪಾಟೀಲ ಅವರ ಬ್ಯಾಂಕಿನ ಕಾರ್ಯಕ್ರಮಕ್ಕೆ ಯತ್ನಾಳ್ ಬಂದರು ಎಂದು ಕೆಲವರು ಕೇಳುತ್ತಾರೆ. ಆದರೆ, ಇದರಲ್ಲಿ ರಾಜಕೀಯ ಏನಿದೆ? ನಾವು ಇಬ್ಬರು ಸಹಕಾರಿ ರಂಗದಲ್ಲಿ ಇದ್ದವರು. ಸಮಾನ ಮನಸ್ಕರು. ನಮ್ಮ ಕಾರ್ಯಕ್ರಮಕ್ಕೆ ಅವರು, ಅವರ ಕಾರ್ಯಕ್ರಮಕ್ಕೆ ನಾವು ಬರುತ್ತೇವೆ. ಅದರಲ್ಲಿ ವಿಶೇಷ ಇಲ್ಲ. ಇದನ್ನೆ ಮಾಧ್ಯಮದಲ್ಲಿ ಎಸ್.ಆರ್.ಪಾಟೀಲ, ಯತ್ನಾಳ್ ಗೌಪ್ಯ ಸಭೆ, ಸಭೆಯಲ್ಲಿ ಎಚ್.ವೈ.ಮೇಟಿ, ಸರನಾಯಕ ಭಾಗಿ. ಪ್ರಸ್ತುತ ರಾಜಕೀಯ ವಿಷಯ ಚರ್ಚೆ ಎನ್ನುತ್ತಾರೆ. ಇಲ್ಲಿ ಏನಾದರೂ ಗೌಪ್ಯವಾಗಿ ಇದ್ದೇವಾ? ಗೌಪ್ಯವೂ ಇಲ್ಲ, ಏನು ಸುಡುಗಾಡು ಇಲ್ಲ ಎಂದು ಯತ್ನಾಳ್ ಹಾಸ್ಯ ಮಾಡಿದರು.

ಬಳಿಕ ಎಸ್.ಆರ್.ಪಾಟೀಲ ಅವರು ಸಹ ನಾನು ಯಾವುದೇ ಸಂಸ್ಥೆ ಆರಂಭಿಸಿದರೂ ಅದು ಅವಳಿ ಜಿಲ್ಲೆಯ ಜನರಿಗೆ ಅನುಕೂಲವಾಗುವಂತೆ ಮಾಡಿದ್ದೇನೆ. ನಮ್ಮ ಸಕ್ಕರೆ ಕಾರ್ಖಾನೆ, ಮೆಡಿಕಲ್ ಕಾಲೇಜ್, ಸಹಕಾರಿ ಸಂಸ್ಥೆಗಳು ಎಲ್ಲವೂ ಸಹ. ಬಾಡಗಂಡಿ ಗ್ರಾಮದಂತೆ ವಿಜಯಪುರದಲ್ಲಿ ಯತ್ನಾಳ್ ಅವರು ಮೆಡಿಕಲ್ ಕಾಲೇಜ್ ಆರಂಭವಾಗಬೇಕು. ನನ್ನ ಕಡೆಗಂತೂ ಗೌಪ್ಯ ಸಭೆಯೂ ಇಲ್ಲ, ಏನು ಇಲ್ಲ. ನನ್ನದೇನಿದ್ದರೂ ನೇರಾ ನೇರ. ನಮ್ಮ ಸಮೂಹ ಸಂಸ್ಥೆಗಳು ಜಾತ್ಯಾತೀತ, ಧರ್ಮಾತೀತ ಮತ್ತು ಪಕ್ಷಾತೀತ. ಬಾಪೂಜಿ ಹಾಗೂ ಸಿದ್ದಸಿರಿ ನಾಡಿನ ಎರಡು ಕಣ್ಣುಗಳಾಗಿ ಬೆಳೆಯುತ್ತವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net