ದೇಶದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಬಿಜೆಪಿ ಆಡಳಿತ ಅಗತ್ಯ

bkt-21-6
ಭಗವಾನ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಿಸಿ ಮಹಾವೀರ ಜಯಂತಿಯನ್ನು ಆಚರಿಸಲಾಯಿತು
Published on

ಬಾಗಲಕೋಟೆ: ದೇಶದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯೆಯಾಗಿವೆ, ಕಾಶ್ಮೀರದಲ್ಲಿ ಶಾಂತಿ ನಲೆಸಿದೆ,ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆಗೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಅವರು ಲೋಕಸಭಾ ಚುನಾವಣೆ ನಿಮಿತ್ಯ ನವನಗರದ 20ನೇ ವಾರ್ಡಿನಲ್ಲಿನ ನಾಗಪ್ಪನ ಕಟ್ಟಿ ಹತ್ತಿರ ವಿರುವ ಆವರಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನರೇಂದ್ರ ಮೋದಿ ಪ್ರದಾನಿಯಾದ ನಂತರ ದೇಶದಲ್ಲಿ ಶಾಂತಿ ನೆಲಸಿದ್ದು, ಪಕ್ಕದ ಚಿನಾ, ಪಾಕಿಸ್ತಾನದ ಸದ್ದಡಗಿದೆ, ದೇಶದ ಸುರಕ್ಷತೆ ದೃಷ್ಟಿಯಿಂದ ಸಮರ್ಥ ಸರಕಾರ, ಸಮರ್ಥ ಪ್ರಧಾನಮಂತ್ರಿಬೇಕು.
ಆದರೆ ಕಾಂಗ್ರೆಸ್ಸ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ಲಾ, ಮುಂದಿನ ತಿಂಗಳು 7 ರಂದು ಚುನಾವಣೆ ಎದುರಾಗಲಿದ್ದು, ಮತದಾರರು ಮೈಮರಿಯದೆ ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ಬಿಜೆಪಿಗೆ ಮತ ಚಲಾಯಿಸಬೆಕು ಎಂದ ಅವರು ರಾಜ್ಯದಲ್ಲಿ ಕಾಂಗ್ರೆಸ್ಸ ಸರಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದರೂ ಮತಕ್ಷೇತ್ರದಲ್ಲಿ ಒಂದೆ ಒಂದು ಅಭಿವೃದ್ದಿ ಕೆಲಸಗಳು ಪ್ರಾರಂಭವಾಗಿಲ್ಲಾ, ನವನಗರದಲ್ಲಿ ವಾರಕ್ಕೆ 1 ದಿನ ಕೂಡಿಯುವ ನೀರು ಬಿಡುತ್ತಿದ್ದಾರೆ,ಅಲ್ಲದೆ ವಿದ್ಯುತ್ ಕೊರತೆ ಹೆಚ್ಚಾಗಿದೆ, ಜನ ನೀರಿಗಾಗಿ ಟ್ಯಾಂಕರಗಳ ಮೊರೆ ಹೋಗುತ್ತಿದ್ದಾರೆ, ನಮ್ಮ ಸರಕಾರ ಇದ್ದಾಗ 24/7 ನೀರಿನ ಕೋರತೆ ಯಾಗದಂತೆ ನೋಡಿಕೋಂಡಿದ್ದೆವು ಅಲ್ಲದೆ ನಗರವನ್ನು ಸ್ವಚ್ಚತೆಯಿಂದ ಇಡಲಾಗಿತ್ತು. ಅಭಿವೃದ್ಧಿ ಪರ ಇರುವ ಬಿಜೆಪಿಯನ್ನು ಬೆಂಬಲಿಸಿ ಮತನೀಡಿ ಎಂದರು.

ಸಭೆಯಲ್ಲಿ ಮಾಜಿ ಬಿಟಿಡಿಎ ಅಧ್ಯಕ್ಷ ಜಿ.ಎನ್.ಪಾಟೀಲ. ಬಸವರಾಜ ಯಂಕಂಚಿ. ರಾಜು ರೇವಣಕರ, ರಾಜು ನಾಯ್ಕರ, ವೀರಣ್ಣ ಹಲಕುರ್ಕಿ,ನಗರಸಭೆ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ವಾರ್ಡಿನ ಅಧ್ಯಕ್ಷ ಜಿ.ಎಸ್.ಬಡಿಗೇರ.ಬೂತ ಅಧ್ಯಕ್ಷರಾದ ಆರತಿ ಹಿರೇಮಠ, ಮಹಾಂತೇಶ ಬಾದೊಡಗಿ,ವಿಶ್ವನಾಥ ಪಾಟೀಲ,ವಾರ್ಡಿನ ಹಿರಿಯರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net