

ಹಿರೀಸಾವೆ: ಪಟ್ಟಣದ ಗ್ರಾಮದೇವತೆ ಶ್ರೀ ಚೌಡೇಶ್ವರಿ ದೇವಿಯ ನೂತನ ರಥ ನಿರ್ಮಾಣಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಬೆಳಗ್ಗೆ ಉಯ್ಯಲೆ ಕಂಬದ ಬಳಿ ಗಣಪತಿ ಸಭಾಂಗಣದಲ್ಲಿ ಮರ ಮತ್ತು ಯಂತ್ರಗಳಿಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ರಥ ನಿರ್ಮಾಣ ಸಮಿತಿಯ ಅಧ್ಯಕ್ಷ ಎಚ್.ಆರ್.ಬಾಲಕೃಷ್ಣ ಮಾತನಾಡಿ, ದೇವಿಯ ಭಕ್ತರ ಸಹಕಾರದೊಂದಿಗೆ ನೂತನ ತೇರಿನ ನಿರ್ಮಾಣ ಕಾರ್ಯ ಹಮ್ಮಿಕೊಳ್ಳಲಾಗಿದೆ. 2024ರ ಫೆಬ್ರವರಿ ತಿಂಗಳಿಗೆ ರಥದ ಕೆಲಸ ಪೂರ್ಣವಾಗಲಿದೆ ಎಂದು ಹೇಳಿದರು.
50 ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ ರಥವು ಹಳೆಯದಾಗಿದ್ದು, ಶಿಥಿಲಗೊಂಡಿದೆ. ಇದರಿಂದಾಗಿ 70 ಲಕ್ಷ ರೂ. ವೆಚ್ಚದಲ್ಲಿ ಮರದ ಹೊಸ ತೇರನ್ನು ನಿರ್ಮಿಸಲಾಗುವುದು ಎಂದು ಸಮಿತಿಯ ಖಜಾಂಚಿ ಎಚ್.ಎಂ.ರಘು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಹೋಬಳಿ ವಿಶ್ವಕರ್ಮ ಸಂಘದ ಅಧ್ಯಕ್ಷ ನಾಗೇಂದ್ರ, ಸಮಿತಿ ಕಾರ್ಯದರ್ಶಿ ಎಚ್.ಬಿ. ಶಿವಕುಮಾರ್, ಸದಸ್ಯರಾದ ಬಸವರಾಜು, ಪ್ರಮೋದ್, ಶ್ರೀಧರ್, ಬೀದಿ ಮನೆ ಶ್ರೀನಿವಾಸ್, ಪ್ರಗತಿವಾಸು, ಚಂದ್ರಣ್ಣ, ಜಾನಿ, ರಮೇಶ್, ಮೋಹನ್, ಮಂಜುನಾಥ್, ರಥ ನಿರ್ಮಾಣ ಶಿಲ್ಪಿ ಶಿವಮೊಗ್ಗದ ಸಂತೋಷ್, ಪ್ರಮುಖರಾದ ಫಣೀಶ್, ರವಿಕುಮಾರ್, ಅರಳಿಮರದ ಕುಮಾರ್ ಇದ್ದರು.