ದೇವಾಲಯ ದರ್ಶನ ಮಾಡಿ

11ark1
Published on

ಅರಕಲಗೂಡು: ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಶಾಸಕ ಎ.ಮಂಜು ಅವರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಚಾಲನೆ ನೀಡಿದರು.


ಚುನಾವಣೆಗೂ ಮೊದಲು ಕಾಂಗ್ರೆಸ್ ನೀಡಿದ್ದ 5 ಘೋಷಣೆಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯೂ ಒಂದು. ಇಂದು ಈ ಯೋಜನೆ ಜಾರಿಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದರು.


ಯಾವ ಮಹಿಳೆಯರು ದೇವಾಲಯಗಳನ್ನು ನೋಡಿಲ್ಲ, ಅವರೆಲ್ಲರೂ ಇಂದಿನಿಂದ ದೇವಾಲಯ ದರ್ಶನ ಪ್ರಯಾಣ ಮಾಡಬಹುದು. ಆದರೆ ಈ ಯೋಜನೆಯನ್ನು ಕೊನೆಯವರೆಗೂ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.


ಬಸ್‌ನಲ್ಲಿ ಅರ್ಧ ಮಾತ್ರ ಮಹಿಳೆಯರಿಗೆ, ಇನ್ನರ್ಧ ಪುರುಷರಿಗೆ ಮೀಸಲು ಇರಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿದರು. ಡಿಪೋ ವ್ಯವಸ್ಥಾಪಕ ಹನುಮಂತಪ್ಪ, ಸಿಪಿಐ ರಘುಪತಿ, ಪಪಂ ಮುಖ್ಯಾಧಿಕಾರಿ ಶಿವಕುಮಾರ್, ಸಬ್ ಇನ್ಸ್‌ಸ್ಪೆಕ್ಟರ್ ಧನರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net