

ಬೆಳಗಾವಿ: ಸುಖ-ಶಾಂತಿ ಸಿಗುವ ಸ್ಥಳವೇ ದೇವಸ್ಥಾನ. ದೇವಸ್ಥಾನ ಸ್ವರ್ಗಾನುಭವ ಕಲ್ಪಿಸುವ ಶಕ್ತಿ ಸ್ಥಾನ ಎಂದು ನಿವೃತ್ತ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಅವರು ಶನಿವಾರ ರಾಮತೀರ್ಥ ನಗರದಲ್ಲಿ ಶ್ರೀಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ಕಮಿಟಿಯಿಂದ ಜೀರ್ಣೋದ್ಧಾರಗೊಳಿಸಿ ಹೊಸ ವಿನ್ಯಾಸದಲ್ಲಿ ನಿರ್ಮಿಸಿದ ಶ್ರೀಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದ ಉದ್ಘಾಟನೆ, 6ನೇ ವಾರ್ಷಿಕೋತ್ಸವ ಹಾಗೂ ಹನುಮ ಜಯಂತಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ನಗರದ ಕಾರಂಜಿಮಠದ ಶ್ರೀಗುರುಸಿದ್ಧ ಮಹಾಸ್ವಾಮೀಜಿ, ಎಲ್ಲಿ ನಿಸ್ವಾರ್ಥ ಇರುತ್ತದೋ ಅಲ್ಲಿ ಶಕ್ತಿ ಇರುತ್ತದೆ. ಆ ಶಕ್ತಿಯೇ ದೇವರು. ಹನುಮ ಜಯಂತಿ ದಿನದಂದು ದೇವಸ್ಥಾನ ಲೋಕಾರ್ಪಣೆಗೊಳ್ಳುತ್ತಿರುವುದು ಇಲ್ಲಿಯ ಜನರ ಪರಿಶುದ್ಧ ಭಾವನೆಗಳ ಸಂಕೇತವಾಗಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುರೇಶ ಉರಬಿನಹಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿದ್ದ ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಸಮಾಜ ಸೇವಕ ಸುರೇಶ ಯಾದವ ವೇದಿಕೆಯಲ್ಲಿದ್ದರು. ಅಂಕಲಗಿ ಸುಕ್ಷೇತ್ರ ಅಡವಿಸಿದ್ದೇಶ್ವರ ಸಂಸ್ಥಾನ ಮಠದ ಡಾ.ಅಮರಸಿದ್ಧೇಶ್ವರ ಮಹಾಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸದ ಜಗದೀಶ ಶೆಟ್ಟರ್, ಧರ್ಮಪತ್ನಿ ಶಿಲ್ಪಾ ಶೆಟ್ಟರ್, ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಕೆಎಲ್‌ಇ ನಿರ್ದೇಶಕ ಮಹಾಂತೇಶ ಕವಟಗಿಮಠ,ವಿಪ ಸದಸ್ಯ ಎನ್. ರವಿಕುಮಾರ, ಮಾಜಿ ಶಾಸಕ ಅನಿಲ ಬೆನಕೆ, ಧುರೀಣ ಮುರುಘೇಂದ್ರ ಪಾಟೀಲ, ಮಾಜಿ ಬುಡಾ ಅಧ್ಯಕ್ಷ ಗೂಳಪ್ಪ ಹೊಸಮನಿ, ಬಿಜೆಪಿ ಮಂಡಳ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಆನಂದ ಅತ್ತುಗೋಳ, ವಿಲಾಸ ಕೆರೂರ, ಈರಯ್ಯ ಖೋತ, ರುದ್ರಣ್ಣ ಚಂದರಗಿ, ಕಮಿಟಿ ಎಸ್.ಜಿ.ಕಲ್ಯಾಣಿ, ಮಂಜುನಾಥ ಪಾಟೀಲ, ಮನೋಹರ ಕಾಜಗಾರ, ಮಲ್ಲಪ್ಪ ದಂಡಿನವರ, ಸಿದ್ದಪ್ಪ ತೇರಣಿ, ಡಿ.ಎಂ.ಟೊಣ್ಣೆ, ಮಲ್ಹಾರ ದಿಕ್ಷಿತ್ ಆರ್ಚಕ, ಸಿದ್ದಬಸಯ್ಯ ಹಿರೇಮಠ, ಕೃಷ್ಣಾ ಪಾಟೀಲ, ಕಲ್ಲಪ್ಪಾ ಮಜಲಟ್ಟಿ, ಮಹೇಶ ಚಿಟಗಿ, ಶಿವಾನಂದ ಮಠಪತಿ, ಬಸವರಾಜ ಹಿರೇಮಠ, ಎನ್.ಬಿ.ಹನ್ನಿಕೇರಿ, ದುಂಡಪ್ಪ ಉಳ್ಳೇಗಡ್ಡಿ, ಜಿ.ಎಸ್.ಹಿರೇಮಠ, ಬಸವರಾಜ ಗೌಡಪ್ಪಗೋಳ, ಪ್ರಹ್ಲಾದ ಹೊಳೆಯಾಚಿ ಇತರರಿದ್ದರು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿದರು. ಕಾರ್ಯದರ್ಶಿ ಮಂಜುನಾಥ ಪಾಟೀಲ ವಂದಿಸಿದರು.