ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ

IMG-20241126-WA0179
Published on

ಸಾಲಿಗ್ರಾಮ: ಜನರ ನೆಮ್ಮದಿ ಮನಃ ಶಾಂತಿಗಾಗಿ ಗ್ರಾಮಗಳಲ್ಲಿ ದೇವಸ್ಥಾನಗಳು ಅಭಿವೃದ್ಧಿ ಆಗಬೇಕು ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.

ತಾಲೂಕಿನ ಮುಂಜನಹಳ್ಳಿ ಗ್ರಾಮದಲ್ಲಿ ನಾಯಕ ಸಮಾಜದ ವತಿಯಿಂದ ನಿರ್ಮಿಸಲಾಗುತ್ತಿರುವ ಶ್ರೀ ಮಾಸ್ತಮ್ಮ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ದೇವಸ್ಥಾನಗಳಿಂದ ಗ್ರಾಮದಲ್ಲಿ ಶಾಂತಿ ನೆಲೆಸುತ್ತದೆ. ಆ ನಿಟ್ಟಿನಲ್ಲಿ ದೇವಸ್ಥಾನ ಅಭಿವೃದ್ಧಿಗೆ ಎಲ್ಲರ ಸಹಕಾರ ಇರಲಿ. ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಸ್ಥರು ನೀಡಿರುವ ಮಾಹಿತಿಯಂತೆ ಸುಮಾರು 85 ಲಕ್ಷ ರೂ. ವೆಚ್ಚವಾಗಲಿದೆ. ದೇವಾಲಯ ಸಮಿತಿ ಸದಸ್ಯರು ವೈಯಕ್ತಿಕವಾಗಿ ಸಹಾಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದೇ ರೀತಿ ಸಾಮರಸ್ಯದಿಂದ ದೇವಸ್ಥಾನ ನಿರ್ಮಾಣವಾಗಲು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.

ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ಸಿ.ಸಿ.ಮಹದೇವ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಉದಯ್ ಶಂಕರ್, ಕಾಂಗ್ರೆಸ್ ವಕ್ತಾರ ಜಬೀರ್, ತಿಪ್ಪೂರು ಮಹದೇವ್, ನರಸಿಂಹ ನಾಯಕ, ವೆಂಕಟರಮಣನಾಯಕ, ಗ್ರಾಪಂ ಸದಸ್ಯ ಮಾದೇವ ನಾಯಕ, ನಾಗೇಶ ನಾಯಕ, ನರಸಿಂಹ ನಾಯಕ, ಸ್ವಾಮಿ ನಾಯಕ, ರಾಮ ನಾಯಕ, ಎಂ.ವಿ.ಮಂಜುನಾಥ್, ಜಯಚಂದ್ರ, ಜಯರಾಮ ನಾಯಕ, ಪಿಡಿಒ ಪ್ರತಾಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net