ದೇವಳಮಕ್ಕಿ ಅಭಿವೃದ್ಧಿಗೆ 4.5 ಕೋಟಿ ರೂಪಾಯಿ

30KWR3
Published on

ಕಾರವಾರ: ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ 4.5 ಕೋಟಿ ರೂ. ಒದಗಿಸಲಾಗಿದೆ ಎಂದು ಶಾಸಕಿ ರೂಪಾಲಿ ನಾಯ್ಕ ತಿಳಿಸಿದರು.

ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಾಮಗಾರಿಗಳು: 1.75 ಕಿಮೀ ಉದ್ದದ ಬಣಗೆ ರಸ್ತೆಯನ್ನು 1.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ, ಗಂಗಾಧರ ಹುಲಸ್ವಾರ ಮನೆಯ ಸಮೀಪ 35 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿ, ಕೋವೆ ಗ್ರಾಮದ ಮುಖ್ಯ ರಸ್ತೆಯಿಂದ ಗಣೇಶ ಪಾಟೀಲ ಮನೆಯವರೆಗಿನ ರಸ್ತೆಯನ್ನು 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ. ಕೋವೆ ಗ್ರಾಮದ ಕುಷ್ಠ ವಾಗು ಹುಲಸ್ವಾರ ಮನೆಯ ಸಮೀಪ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕಿ ಚಾಲನೆ ನೀಡಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ಶಿರ್ವೆ ಹಾಗೂ ಬೇಳೂರಿನಲ್ಲಿ ಬೂತ್ ಕಾರ್ಯಕರ್ತರ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ, ಉಪಾಧ್ಯಕ್ಷ ದೇವಿದಾಸ ಬೇಳೂರಕರ್, ಪ್ರಣವ ರಾಣೆ, ಸಂತೋಷ ಗೌಡ, ಶಾಂತಾರಾಮ ಗುನಗಿ, ಘನಶ್ಯಾಮ ಬಾಂದೇಕರ್, ಪ್ರಜ್ವಲ ಶೇಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net