ದೇವದಾಸಿಯರ ಮಾಸಾಶನ ಮಂಜೂರು ಮಾಡಲು ಆಗ್ರಹ

0510KLB06
Published on

ಕಲಬುರಗಿ: ದೇವದಾಸಿ ಕುಟುಂಬಕ್ಕೆ ಸಾಮಾಜಿಕ ನ್ಯಾಯ ಒದಗಿಸುವುದೂ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಲಂ ಜನಾಂದೋಲನ-ಕರ್ನಾಟಕ ಕಾರ್ಯಕರ್ತರು ಕಲಬುರಗಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ದೇವದಾಸಿ ಪದ್ದತಿ ನಿರ್ಮೂಲನೆ ಮಾಡಬೇಕು, ಕುಟುಂಬದ ಬದುಕುವ ಹಕ್ಕು ರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಸರ್ಕಾರ ಮುಂದಾಗಬೇಕು. ಗುಡಿಗಳಲ್ಲಿ ದಾಸಿ ಬಿಡುವ ಸಿಸ್ಟಂ ಇಂದಿಗೂ ಜಾರಿಯಲ್ಲಿದೆ. ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ದೂರಿದರು.
ದೇವದಾಸಿ ತಾಯಂದಿರು ಮತ್ತು ಅವರ ಮಕ್ಕಳ ಬದುಕುವ ಹಕ್ಕಿನ ಮೂಲಭೂತ ಪ್ರಶ್ನೆಗೆ ಸರ್ಕಾರ, ನಾಗರಿಕ ಸಮಾಜ ಉತ್ತರ ನೀಡಬೇಕಿದೆ. ಕೆಲ ವರ್ಷಗಳಿಂದ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇವರ ಮಕ್ಕಳ ಭವಿಷ್ಯ ರೂಪಿಸುವ ಸಲುವಾಗಿ ಹೊಸ ಸಮಗ್ರ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದರು.
ದೇವದಾಸಿ ಪದ್ಧತಿ ಆಚರಿಸಲು ಉತ್ತೇಜಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕಾಯಿದೆಯಲ್ಲಿ ಸೇರ್ಪಡೆ ಮಾಡಬೇಕು. ಎಲ್ಲರಿಗೂ ಮಾಸಾಶನ ನೀಡಬೇಕು. ದೇವದಾಸಿ ಮಕ್ಕಳು ತಾಯಿ ಮತ್ತು ತಂದೆ ಮೂಲದಿಂದ ಆಸ್ತಿ ಹಕ್ಕು ಪಡೆಯಲು ಅರ್ಹರು ಎಂಬ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಸಿಎಂಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಸಲ್ಲಿಸಿದರು. ಜಿಲ್ಲಾ ಸಂಚಾಲಕಿ ರೇಣುಕಾ ಸರಡಗಿ, ಚಂದಾಲಿAಗ ಕಲಾಲಬಂಡಿ, ಕವಿತಾ ಶೆಟಗಾರಮಠ್, ಉಷಾಬಾಯಿ, ಚನ್ನಮ್ಮ ಜಮಾದಾರ್, ಗೌರಮ್ಮ ಮಾಕಾ, ಸುನಿತಾ ಕೊಳ್ಳೂರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net