ದೇಗುಲ ಪರಂಪರೆ ಉಳಿಸಿಕೊಂಡು ಹೋಗೋಣ

23KMD-1
Published on

ಕೆ.ಎಂ.ದೊಡ್ಡಿ: ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ಹೆಚ್ಚು ಮಹತ್ವವಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.


ಸಮೀಪದ ಅಣ್ಣೂರಿನಲ್ಲಿ ಜೀರ್ಣೋದ್ಧಾರಗೊಂಡ ಶ್ರೀ ಮಾರಮ್ಮ ದೇವಾಲಯ ಮರುಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿದ ಅವರು, ದೇವಾಲಯ ಎಂದರೆ ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಾದ ಸ್ಥಳವಾಗಿದೆ ಎಂದರು.


ದೇವಾಲಯ ಜೀರ್ಣೋದ್ಧಾರಕ್ಕೆ ನಮ್ಮ ಹಿರಿಯರು ಸಹಕರಿಸಿದ್ದರಿಂದಲೇ ಇಂದು ದೇವಾಲಯಗಳು ಪರಂಪರೆಯಾಗಿ ಉಳಿದು ಬಂದಿವೆ. ನಾವೂ ಇದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.


ಧಾರ್ಮಿಕ ಕಾರ್ಯ: ಮಾರಮ್ಮ ದೇವಾಲಯ ಮರುಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಗಂಗಾಪೂಜೆ, ವೀರಗಾಸೆ ಕುಣಿತ ಸಮೇತ ಗ್ರಾಮ ಪ್ರದಕ್ಷಿಣೆ, ಗಣಪತಿ ಹೋಮ, ಪುಣ್ಯಾಹ ಪಂಚಗವ್ಯ, ರಕ್ಷಬಂಧನ, ಅಂಕುರಾರ್ಪಣೆ, ವಾಸ್ತುಹೋಮ, ದಿಕ್ಪಾಲಕರ ಪೂಜೆ , ಆದಿವಾಸಿಗಳ ಪೂಜೆ, ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಜರುಗಿತು.


ಜಿ.ಪಂ. ಮಾಜಿ ಸದಸ್ಯ ಎ.ಎಸ್.ರಾಜೀವ್, ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದರಾಮೇಗೌಡ ಸೇರಿದಂತೆ ಗ್ರಾಮದ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net