ದೆಹಲಿ ಮಟ್ಟದಲ್ಲಿ ಏನಾಗುತ್ತಿದೆಂದು ನನಗೆ ಗೊತ್ತಿಲ್ಲ

2261e167-4f8b-49e2-9ab2-cb6b3be263b1
ಮಧು ಬಂಗಾರಪ್ಪ
Published on

ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನ ಕೆಲ ನಾಯಕರಿಗೆ ಹೈಕಮಾಂಡ್ ದೆಹಲಿಗೆ ಕರೆದಿರುವ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಯಾವಾಗ ಯಾವ ರೀತಿ ಹಾಕುತ್ತಾರೆಂದು ಗೊತ್ತಾಗುವುದಿಲ್ಲ. ದೆಹಲಿಗೆ ಯಾರೇ ಆಗಲಿ ದಿಢೀರೆಂದು ಹೋಗಲ್ಲ. ಅವರು ಕರೆದಾಗೆಲ್ಲ ಹೋಗುತ್ತಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಬಾಗಲಕೋಟೆಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಆರ್‌ಸಿಬಿ ವಿಜಯೋತ್ಸವ ಹಾಗೂ ಕಾಲ್ತುಳಿತ ಪ್ರಕರಣಕ್ಕೆ ಸಂಬAಽಸಿದAತೆ ಕರೆದಿರಬಹುದು. ದೆಹಲಿಗೆ ಬರುವಂತೆ ಹೇಳಿರಬಹುದು, ಇವರು ಹೋಗಿರಬಹುದು. ಇಲ್ಲಿ ನನಗೆ ದೆಹಲಿ ಮಟ್ಟದಲ್ಲಿ ಏನಾಗುತ್ತಿದೆ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷರು ನಿಮಗೆ ಹೇಳಬಹುದು ಎಂದರು.

ಇನ್ನು ಸತೀಶ್ ಜಾರಕಿಹೊಳಿ ಪಕ್ಷದ ರಾಜ್ಯಾಧ್ಯಕ್ಷರಾಗುತ್ತಾರೆ ಎನ್ನುವ ಪ್ರಶ್ನೆಗೆ, ಇದನ್ನು ಅವರಿಗೆ ಕೇಳಿದರೆ ಒಳ್ಳೆಯದು. ಅವರು ಹಿರಿಯರು ಇದ್ದಾರೆ. ನಮ್ಮ ಪಕ್ಷದಲ್ಲಿ ಒಂದು ವ್ಯವಸ್ಥೆ ಇದೆ. ಯಾವುದೇ ನಿರ್ಧಾರ ಆಗಬೇಕಿದ್ದರೆ ಹೈಕಮಾಂಡ್ ಪರವಾನಿಗೆ ಬೇಕು. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಗೌರವದಿಂದ ನಡೆದುಕೊಳ್ಳಬೇಕಾಗುತ್ತದೆ. ಪಕ್ಷದಲ್ಲಿ ಕೆಲವರು ಹಿರಿಯರು ಇದ್ದಾರೆ, ಹಲವರು ಆಕಾಂಕ್ಷಿಗಳಿದ್ದಾರೆ. ಅಂತಿಮವಾಗಿ ಪಕ್ಷದ ತೀರ್ಮಾನಕ್ಕೆ ನಾವು ಬದ್ಧರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net