ದೆವ್ವದ ಭಯಕ್ಕೆ ೧೭ ಲಕ್ಷ ಗಯಾ !

download
Published on

ಬಾಗಲಕೋಟೆ: ನಿಧನ ಹೊಂದಿದ ತಾಯಿ ದೆವ್ವವಾಗಿ, ನಿನ್ನ ಮಗಳಿಗೆ ಬಡಿದುಕೊಂಡಿದೆ. ಇನ್ನು ಎರಡು ವರ್ಷ ನಿನ್ನ ಮಗಳು ಹಾಗೂ ಮಾವನವರಿಗೆ ತೊಂದರೆ ಇದೆ. ಇದನ್ನು ಪರಿಹರಿಸಲು ವಿವಿಧ ಪೂಜೆ ಮಾಡಬೇಕು. ಅದಕ್ಕೆ ಹಣ ನೀಡಬೇಕಾಗುತ್ತದೆ'.

ಹೀಗೆಂದು ದೂರದ ಮಹಾರಾಷ್ಟçದ ಕೊಲ್ಲಾಪುರ ಮೂಲದ ಮಹಿಳಾ ಜೋತಿಷಿ ಒಬ್ಬರು ಪೋನ್ ನಲ್ಲಿ ಹೇಳಿದ ಮಾತನ್ನು ನಂಬಿ ಜಿಲ್ಲೆಯ ಮಹಿಳೆಯೊಬ್ಬರು ಪರಹಾರಕ್ಕೆಂದು ಕಳೆದುಕೊಂಡ ಹಣ ಭರ್ತಿ ೧೭,೧೧,೦೦೧ ರೂ.ಗಳು.

ಹೀಗೆ ದೆವ್ವದ ಭಯದ ಹುಟ್ಟಿಸಿ ಹಣ ದೋಚಿರುವ ಜೋತಿಷಿ ಮಹಿಳೆ ಮಹಾರಾಷ್ಟçದ ಕೊಲ್ಲಾಪುರ ನಗರದ ಸೀಮಾ ಶಾಂಭವಿ ಉರ್ಪ ಸೀಮಾ ಸುರೇಶ ಶೆಟ್ಟಿ ಆರೋಪಿ ಆಗಿದ್ದಾಳೆ. ಈ ಜೋತಿಷಿ ಮಾತು ನಂಬಿ ಮೋಸಕ್ಕೆ ಒಳಗಾದವರು ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಮಹಿಳೆ ಆಗಿದ್ದಾರೆ.

ತಾನು ಹರಿಬಿಟ್ಟ ಗೊಳ್ಳು ದೆವ್ವದ ಭಯ ಆ ಮಗವಿನ ತಾಯಿಯನ್ನು ಮಾನಸಿಕವಾಗಿ ಕುಗ್ಗಿಸತೊಡಗಿದೆ ಎಂದು ತಿಳಿದ ಮಹಿಳಾ ಜೋತಿಷಿ ಸಿಕ್ಕಿದ್ದೇ ಸೀರುಂಡೆ ಎಂದು ಏಳು ತಿಂಗಳು ಕಾಲ ತನ್ನ ಬ್ಯಾಂಕ್ ಖಾತೆಗೆ ೧೭ ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾಳೆ. ಇತ್ತ ಮಗುವಿನ ತಾಯಿ ತನ್ನ ಹಾಗೂ ತನ್ನ ಪತಿಯ ಬ್ಯಾಂಕ್ ಖಾತೆಯಿಂದ ೦೮.೧೦.೨೦೨೪ ರಿಂದ ೦೭.೦೫.೨೦೨೫ರ ಅವಽಯಲ್ಲಿ ಹಣ ಹಾಕುತ್ತಲೇ ಹೋಗಿದ್ದಾರೆ. ಜೋತಿಷಿ ಮಾಡಿದ್ದೇನೆಂದ ಯಾವ ಪೂಜೆಗಳಿಂದಲೂ ಮಗು ಸಂಪೂರ್ಣ ಹುಷಾರಾಗದೇ ಹೋದಾಗ ಆ ಬಗ್ಗೆ ಕೇಳಿದರೆ ಅತ್ತ ಸರಿಯಾದ ಉತ್ತರ ಸಿಕ್ಕಿಲ್ಲ. ಆಗ ತಾವು ಮೋಸ ಹೋಗಿರುವುದು ಗೊತ್ತಾಗಿ ಇದೀಗ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದಾರೆ.

ಜ್ವರಕ್ಕೆ ದೆವ್ವದ ನಂಟು ಬೆಸೆದ ಜೋತಿಷಿ :

ಮೋಸಕ್ಕೆ ಒಳಗಾಗಿರುವ ಮಹಿಳೆಯ ಎರಡು ವರ್ಷದ ಮಗುವಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು. ವೈದ್ಯರ ಬಳಿ ತೋರಿಸಿದಾಗ ಕಡಿಮೆ ಆಗಲಿಲ್ಲ. ಇದನ್ನು ತಮ್ಮ ಸ್ನೇಹಿತೆಗೆ ತಿಳಿಸಿದ್ದಾಗ. ಆಗ ಸ್ನೇಹಿತೆ ಮಹಾರಾಷ್ಟçದ ಕೊಲ್ಲಾಪುರದಲ್ಲಿ ಮಹಿಳಾ ಜೋತಿಷಿ ಒಬ್ಬರು ಇದ್ದಾರೆ. ಅವರನ್ನು ಸಂಪರ್ಕಿಸಿದರೆ ಜ್ವರ ಕಡಿಮೆ ಆಗಬಹುದು ಎಂದು ಸಲಹೆ ನೀಡಿ ಜೋತಿಷಿಯ ಸಂಪರ್ಕದ ಸಂಖ್ಯೆಯನ್ನು ಕೊಟ್ಟಿದ್ದಾರೆ.

ಸ್ನೇಹಿತೆಯ ಸಲಹೆಯಂತೆ ಮಹಿಳೆ -ೆÇÃನ್ ಮೂಲಕ ಜೋತಿಷಿಯನ್ನು ಸಂಪರ್ಕಿಸಿದಾಗ Ã ದೆವ್ವದ ಕಥೆ ಹರಿಬಿಟ್ಟಿದ್ದಾಳೆ. ದೆವ್ವ ಓಡಿಸಲು ವಿಶೇಷ ಪೂಜೆ ಮಾಡಿಸಬೇಕು. ಅದಕ್ಕೆ ತಾಯಿ ಒಪ್ಪಿದ್ದು, ಜೋತಿಷಿ ಹೇಳಿದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಪೂಜೆ ಮಾಡಿಸಿದ್ದೇನೆ. ಜ್ವರ ಕಡಿಮೆ ಆಗಿದೆಯಾ ಎಂದು ಎಂದು ಜೋತಿಷಿ ವಿಚಾರಿಸಿದ್ದಾರೆ. ಸ್ವಲ್ಪ ಜ್ವರ ಕಡಿಮೆ ಆಗಿದ್ದರಿಂದ ಹೌದು ಎಂದಿದ್ದಾರೆ. ಅಷ್ಟಕ್ಕೆ ಬಿಡದ ಜೋತಿಷಿ, ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಮತ್ತಷ್ಟು ವಿವಿಧ ಪೂಜೆಗಳನ್ನು ಮಾಡಬೇಕಾಗುತ್ತದೆ ಎಂದು ನಂಬಿಸಿ ಮತ್ತೆ ಮತ್ತೆ ದುಡ್ಡು ದೋಚುತ್ತಲೇ ಹೋಗಿದ್ದಾರೆ. ಜೋತಿಷಿ ಮುಖವನ್ನು ಒಮ್ಮೆಯೂ ನೋಡದೇ ಬರೀ -ÉÇÃನ್‌ನಲ್ಲೆ ಮಾತನಾಡುತ್ತಲೇ ಮೋಸ ಹೋಗಿದ್ದಾರೆ ಬಾಗಲಕೋಟೆ ಜಿಲ್ಲೆಯ ಮಹಿಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net