ದುರ್ಗಾಪರಮೇಶ್ವರಿ ರಥೋತ್ಸವ

3bkl1 (2)
Published on

ಭಟ್ಕಳ: ತಾಲೂಕಿನ ಕಿತ್ರೆ ಮಾರುಕೇರಿ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿದೇವಿ ದೇವಸ್ಥಾನದ ವರ್ಧಂತಿ ಮಹೋತ್ಸವ ಹಾಗೂ ರಥೋತ್ಸವ ಶ್ರೀ ರಾಘವೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಹಸ್ರಾರು ಭಕ್ತರ ಜಯಘೊಷಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ಜರುಗಿತು.

ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅಲಂಕೃತ ರಥದಲ್ಲಿ ದೇವಿಯ ಬೆಳ್ಳಿ ಮೂರ್ತಿಯನ್ನಿರಿಸಿ ಭಕ್ತರೆಲ್ಲ ರಥವನ್ನು ಎಳೆದರು. ದೇವಸ್ಥಾನ ಆಡಳಿತ ಕಮಿಟಿಯ ಶಿವಾನಂದ ಮುಲ್ಲೆಮಕ್ಕಿ, ಪ್ರಮುಖ ಗಣೇಶ ಹೆಬ್ಬಾರ, ಎಂ.ಎಂ. ಹೆಬ್ಬಾರ, ಶಿವಾನಂದ ಹೆಬ್ಬಾರ, ಉಮೇಶ ಹೆಗಡೆ, ದೇವಸ್ಥಾನ ಆಡಳಿತ ಕಮಿಟಿ ಸದಸ್ಯರು, ಭವತಾರಿಣಿ ವಲಯ ಅಧ್ಯಕ್ಷರು, ವಲಯ ಪ್ರಮುಖರು, ಸಾರ್ವಜನಿಕರು ದೇವಿಯ ದರ್ಶನ ಪಡೆದರು. ನಂತರ ಶ್ರೀ ರಾಘವೇಶ್ವರ ಸ್ವಾಮೀಜಿಗಳು ವಸತಿ ಸಮುಚ್ಚಯ ಯಾತ್ರಿ ನಿವಾಸವನ್ನು ಲೋಕಾರ್ಪಣೆಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net