

ಹಿರೀಸಾವೆ: ಹೋಬಳಿಯ ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದಿನೇಶ್ ಹಾಗೂ ಉಪಾಧ್ಯಕ್ಷರಾಗಿ ಸವಿತಾ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.
ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಗ್ರಾಪಂ ಕಚೇರಿಯಲ್ಲಿ ಚುನಾವಣಾ ಪ್ರಕ್ರಿಯೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಮೆಳ್ಳಹಳ್ಳಿ ಗ್ರಾಮದ ಸದಸ್ಯ ದಿನೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉಳ್ಳಾವಳ್ಳಿ ಗ್ರಾಮದ ಸದಸ್ಯೆ ಸವಿತಾ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ರೇಷ್ಮೆ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಕೆ.ಎಸ್.ರಾಚಪ್ಪ ಅವಿರೋಧ ಆಯ್ಕೆ ಘೋಷಿಸಿದರು. ಗ್ರಾಮ ಪಂಚಾಯಿತಿಯ 21 ಸದಸ್ಯರೂ ಚುನಾವಣೆಯಲ್ಲಿ ಪಾಲ್ಗೊಂಡಿದ್ದರು.
ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಅಭಿನಂದಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ವಾಸು, ಎಪಿಎಂಸಿ ಮಾಜಿ ಅಧ್ಯಕ್ಷ ರಘುರಾಮ್, ಜೆಡಿಎಸ್ ಮುಖಂಡ ನರಿಹಳ್ಳಿ ತಾತೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ವಿನೋದಾ, ಸದಸ್ಯರಾದ ರವಿ, ಬಾಲಕೃಷ್ಣ, ಎಚ್.ಕೆ.ಸುಧಾಕರ್, ಶಿವಶಂಕರ್, ಚಂದ್ರಹಾಸ್, ಅನಿತಾ ತಾತೇಗೌಡ, ಸೌಮ್ಯ ಗವೀಶ್, ದಾಕ್ಷಾಯಿಣಿ, ಪಿಡಿಒ ಕೆ.ಎಸ್.ಪ್ರಕಾಶ್ ಇತರರು ಇದ್ದರು.