

ಕಲಬುರಗಿ: ಶ್ರೀ ಶರಣಬಸವೇಶ್ವರರ ಮಹಾದಾಸೋಹ ಜಾತ್ರಾ ಮಹೋತ್ಸವ ನಿಮಿತ್ತ ನಗರದ ನೆಹರು ಗಂಜ್‌ನ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘ, ಕೃಷಿ ಪರಿಕರ ಮಾರಾಟಗಾರರ ಸಂಘ ಮತ್ತು ಗುಲ್ಬರ್ಗ ದಾಲ್ ಮಿಲ್ರ‍್ಸ್ ಅಸೋಸಿಯೇಷನ್‌ನಿಂದ ಶರಣಬಸವೇಶ್ವರ ದಾಸೋಹಕ್ಕೆ ಶನಿವಾರ ದವಸ, ಧಾನ್ಯ, ಆಹಾರ ಪದಾರ್ಥಗಳನ್ನು ನೀಡಲಾಯಿತು.
ಗಂಜ್‌ನಿAದ ನೂರಾರು ವರ್ತಕರು ದಾಸೋಹ ಮನೆವರೆಗೆ ಶ್ರೀ ಶರಣಬಸವೇಶ್ವರರ ಬೃಹತ್ ಭಾವಚಿತ್ರದೊಂದಿಗೆ ವಾಹನದಲ್ಲಿ ದವಸ, ಧಾನ್ಯಗಳನ್ನು ಮೆರವಣಿಗೆ ಮೂಲಕ ಆಗಮಿಸಿದರು. ವಾದ್ಯ, ಮೇಳ, ಡೊಳ್ಳು, ಭಜನೆಯೊಂದಿಗೆ ನೂರಾರು ಜನರು ಆಗಮಿಸಿ, ಶರಣರ ಸನ್ನಿಧಿಗೆ ಅರ್ಪಣೆ ಮಾಡಿದರು. ಎಲ್ಲ ವರ್ತಕರು, ವ್ಯಾಪಾರಿಗಳಿಂದ ಸಂಗ್ರಹಿಸಿದ ಜೋಳ, ಬೆಳೆ, ಅಕ್ಕಿ, ಗೋದಿ, ಬೆಲ್ಲ ಸೇರಿ ನೂರಾರು ಕ್ವಿಂಟಾಲ್ ಧವಸ ಧಾನ್ಯಗಳನ್ನು ಅರ್ಪಿಸಲಾಯಿತು.
ನಂತರ ಶರಣಬಸವೇಶ್ವರ ಮಹಾದಾಸೋಹ ಪೀಠದಿಂದ ಗಂಜ್ ವರ್ತಕರನ್ನು ಸನ್ಮಾನಿಸಿ, ಆಶೀರ್ವದಿಸಲಾಯಿತು. ಗಂಜ್ ಸಂಘದ ಅಧ್ಯಕ್ಷ ಶ್ರೀಮಂತ ಉದನೂರ, ಚಂದ್ರಕಾAತ ಕೋಬಾಳ, ಬಸವರಾಜ ಬಾಸಗಿ, ಶಶಿಕಾಂತ ಪಾಟೀಲ್, ಸಂತೋಷ ಲಂಗರ, ಮಡಿವಾಳಯ್ಯ ಸ್ವಾಮಿ, ಸಂತೋಷ ಟಂಕೆ, ಭೀಮಾಶಂಕರ ಗೋಗಿ ಇತರರಿದ್ದರು.