ದಾವಣಗೇರಿಯಲ್ಲಿ ೨೪ನೇ ಮಹಾ ಅಧಿವೇಶನ

bkt-19-11
Published on

ಬಾಗಲಕೋಟೆ: ಇದೇ ಡಿ. ೨೩ ಮತ್ತು ೨೪ ರಂದು ಡಾವಣಗೇರಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ೨೪ನೇ ಮಹಾ ಅಧಿವೇಶನ ನಡೆಯಲಿದೆ ಎಂದು ಮಹಾಸಭಾ ಉಪಾಧ್ಯಕ್ಷ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಹಾ ಅಧಿವೇಶನದ ಬಗ್ಗೆ ಮಾಹಿತಿ ವಿವರಿಸಿದ ಅವರು, ಮಹಾ ಅಧಿವೇಶನದಲ್ಲಿ ನಾಡಿನ ಹರ-ಗುರು-ಚರಮೂರ್ತಿಗಳು, ರಾಜಕೀಯ ಮುಖಂಡರು, ಸಮಾಜದ ಗಣ್ಯರು, ಸಾಹಿತಿ, ಕಲಾವಿದರು ಭಾಗವಹಿಸಲಿದ್ದಾರೆ. ೨೩ ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಎರಡು ದಿನಗಳಲ್ಲಿ ಕೃಷಿ ಮತ್ತು ಕೈಗಾರಿಕೆ ಅಧಿವೇಶನ, ಶೈಕ್ಷಣಿಕ ಅಧಿವೇಶನ, ಧಾರ್ಮಿಕ ಅಧಿವೇಶನ, ಮಹಿಳಾ ಮತ್ತು ಯುವ ಅಧಿವೇಶನ, ನೌಕರರ ಅಧಿವೇಶನ, ಸಾಹಿತಿಗಳ ಅಧಿವೇಶನ ಸಮಾರೋಪ ಸಮಾರಂಭ ನಡೆಯಲಿದೆ. ಡಿ. ೨೩ ರಂದು ಮಧ್ಯಾಹ್ನ ೩ ಗಂಟೆಗೆ ಬಹಿರಂಗ ಅಧಿವೇಶನ-ನಿರ್ಣಯಗಳ ಮಂಡನೆ ಜರುಗಲಿದೆ ಎಂದು ತಿಳಿಸಿದರು.

ಮಹಾ ಅಧಿವೇಶನಕ್ಕೆ ಬಾಗಲಕೋಟೆ ಜಿಲ್ಲೆಯಿಂದಲೂ ಹೆಚ್ಚಿನ ಜನರು ಭಾಗವಹಿಸಲಿದ್ದಾರೆ. ಆಗಮಿಸುವ ಜನರು ನೋಂದಣಿ ಮಾಡಿಕೊಳ್ಳಬೇಕು. ಅವರಿಗೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಪ್ರತಿಯೊಬ್ಬರು ಸದಸ್ಯರನ್ನಾಗಿಸುವ ಗುರಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಾ ಅಧಿವೇಶನದಲ್ಲಿ ಸಮಾಜದ ಎಲ್ಲ ಒಳಪಂಗಡಗಳ ಪ್ರತಿಯೊಬ್ಬರನ್ನು ಸದಸ್ಯರನ್ನಾಗಿಸುವ ಅಜಂಡ ಇದೆ. ವೀರಶೈವ ಲಿಂಗಾಯತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಜನಗಣತಿ ವಿಚಾರವಾಗಿ ನಮ್ಮ ವಿರೋಧ ಇಲ್ಲ. ಆದರೆ, ಅದು ವೈಜ್ಞಾನಿಕವಾಗಿ ನಡೆಯಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ವೀರಶೈವ ಲಿಂಗಾಯತರ ಜನಸಂಖ್ಯೆ ಕಡಿಮೆ ತೋರಿಸುವ ಆಗುತ್ತಿದೆ. ಈ ಹಿನ್ನಲೆಯಲ್ಲಿ ಮರು ಜನಗಣತಿ ಆಗಬೇಕು. ಮನೆ ಮನೆಯ ಗಣತಿ ನಡೆಯಬೇಕು ಎನ್ನುವುದು ಮಹಾಸಭಾದ ಆಗ್ರಹವಾಗಿದೆ. ಇದನ್ನೆ ನಮ್ಮ ಅಧ್ಯಕ್ಷರು ಹೇಳಿದ್ದಾರೆ. ಹಾಗೆಯೇ ಸಮಾಜದ ಎಲ್ಲ ಶಾಸಕರು, ಸಚಿವರು ಪಕ್ಷಬೇಧ ಮರೆತು ಹೋಗಿ ಅದನ್ನೆ ಹೇಳಿದ್ದಾರೆ ಎಂದರು.

ಸೌಲಭ್ಯ ಪಡೆಯಲು ಮಾತ್ರ ಒಳಪಂಗಡ ಸೀಮಿತ ಇರಲಿ:
ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಒಳಪಂಗಡಗಳು ಸೀಮಿತವಾಗಿರಲಿ, ಧರ್ಮದ ವಿಚಾರ ಬಂದಾಗ ವೀರಶೈವ ಲಿಂಗಾಯತ, ದೇಶ ಎಂದಾಗಿ ನಾವೆಲ್ಲ ಹಿಂದೂ ಎಂದು ಇರಬೇಕು. ಇನ್ನೊಂದು ಸಮಾಜದಲ್ಲಿ ಇರುವ ಜನಸಂಖ್ಯೆಯನ್ನು ರಾಜಕೀಯಕ್ಕಾಗಿ ಸಂಖ್ಯೆ ಕಡಿಮೆ ತೋರಿಸುವಂತಾಗಬಾರದು. ನಮ್ಮ ಸಮುದಾಯದ ಅನೇಕರು ಮುಖ್ಯಮಂತ್ರಿಗಳು ಆಗಿದ್ದಾರೆ. ಯಾರೂ ಕೂಡ ಅವರು ಹೆಚ್ಚು, ಇವರು ಕಡಿಮೆ ಎಂದು ಮಾಡಿರಲಿಲ್ಲ. ಈಗಲೂ ಅದು ಆಗಬಾರದು. ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ನಡೆಸಲಿ ಎಂದು ಚರಂತಿಮಠ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net