

ಅರಸೀಕೆರೆ: ಆಧುನಿಕ ತಂತ್ರಜ್ಞಾನದ ಜತೆಗೆ ಸುಧಾರಿತ ಕ್ರಮಗಳನ್ನು ಅನುಸರಿಸಿದಲ್ಲಿ ದಾಳಿಂಬೆ ಬೆಳೆಯಲ್ಲಿ ನಿರೀಕ್ಷೆಗೂ ಮೀರಿದ ಆದಾಯ ಗಳಿಸಲು ಸಾಧ್ಯವಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸೀಮಾ ಹೇಳಿದರು.
ತಾಲೂಕಿನ ಕೊಮ್ಮಾರಘಟ್ಟ ಗ್ರಾಮದ ಕೃಷಿಕ ಚಿದಾನಂದ್ ದಾಳಿಂಬೆ ತೋಟಕ್ಕೆ ಇತ್ತೀಚೆಗೆ ಭೇಟಿ ನೀಡಿ ಮಾತನಾಡಿದ ಅವರು, ಮೋಡ ಮುಸುಕಿದ ವಾತಾವರಣ ಹಾಗೂ ಮಳೆ ಹಿನ್ನೆಲೆಯಲ್ಲಿ ಬೆಳೆಗೆ ಅಂತ್ರಗ್ನೋಸ್, ಫೈಟಾಪ್ತರ, ಸ್ಕ್ಯಾಬ್ ಬ್ಯಾಕ್ಟೀರಿಯಲ್ ಬ್ಲೈಟ್, ದುಂಡಾಣು ರೋಗಗಳು ಕಾಡುವ ಸಾಧ್ಯತೆ ಹೆಚ್ಚಿದೆ. ಹವಾಮಾನ ವೈಪರೀತ್ಯದ ನಡುವೆಯೂ ಕೀಟ ನಾಶಕ ಸಿಂಪಡಿಸುವುದು ಸೂಕ್ತ. ನಿರ್ಲಕ್ಷ್ಯ ತೋರಿದಲ್ಲಿ ನಿರೀಕ್ಷಿತ ಲಾಭಗಳಿಸಲು ಸಾಧ್ಯವಿಲ್ಲ ಎಂದರು.
ಸಮರ್ಥ ರೈತ ಮಿತ್ರ ಆಗ್ರೋ ಏಜೆನ್ಸಿ ಮುಖ್ಯಸ್ಥ ಅಕ್ಷಯ್ ಚಂದನ್, ತೋಟಗಾರಿಕೆ ಇಲಾಖೆ ರಂಗನಾಥ್, ಚಿದಾನಂದ್ ಇತರರಿದ್ದರು.