

ಹಳಿಯಾಳ: ತಮ್ಮ ಬದುಕನ್ನು ಪಣಕ್ಕಿಟ್ಟು ರೋಗಿಗಳ ಶುಶ್ರೊಷೆಯಲ್ಲಿ ತೊಡಗಿರುವ ದಾದಿಯರು ಸೇವೆ ಪವಿತ್ರ, ಪೂಜ್ಯ ಆದರಣೀಯವಾಗಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಬೆಂಗಳೂರಿನಿಂದ ಮಂಗಳವಾರ ಮಧ್ಯಾಹ್ನ ಆಗಮಿಸಿದ ಅವರು ಇಲ್ಲಿಯ ತಾಲೂಕು ಆಸ್ಪತ್ರೆಯಲ್ಲಿ ಕೋವಿಡ್-19 ಪ್ರಾಥಮಿಕ ಚಿಕಿತ್ಸೆಗೊಳಗಾದ ನಂತರ ವೈದ್ಯರು ಮತ್ತು ದಾದಿಯರ ಸೇವೆಯನ್ನು ಅಭಿನಂದಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ, ಡಾ. ಜಿ. ಆಚಾರಿ, ವಿಆರ್ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು, ರುಡಸೆಟಿ ಸಂಯೋಜಕ ವಿನಾಯಕ ಚವ್ಹಾಣ, ದೇಶಪಾಂಡೆ ಭವನದ ಸಂಪರ್ಕ ಅಧಿಕಾರಿ ಎಸ್.ಜಿ. ಮಾನಗೆ ಇತರರು ಇದ್ದರು.
ಗೃಹರಕ್ಷಕ ದಳ ಸಿಬ್ಬಂದಿಗೆ ಕಿಟ್ ವಿತರಣೆ: ಇಲ್ಲಿಯ ಮಿನಿವಿಧಾನ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಗೃಹರಕ್ಷಕ ದಳದವರಿಗೆ, ಬ್ಯೂಟಿ ಪಾರ್ಲರ್ ಸಿಬ್ಬಂದಿಗೆ ಅಗತ್ಯ ದಿನಸಿ ಕಿಟ್ಗಳನ್ನು ಶಾಸಕ ಆರ್.ವಿ. ದೇಶಪಾಂಡೆ ವಿತರಿಸಿದರು.
ಈ ವೇಳೆ ಮಾತನಾಡಿದ ಅವರು, ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಬರೆಯಲಿರುವ ಪರೀಕ್ಷಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ತಾಲೂಕಿನ ಎಸ್ಎಸ್ಎಲ್ಸಿ ಮಕ್ಕಳಿಗೆ ಮಾಸ್ಕ್ಗಳನ್ನು ವಿತರಿಸಲಾಗುವುದು ಎಂದರು.
ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ತಾ.ಪಂ. ಅಧ್ಯಕ್ಷೆ ರೀಟಾ ಸಿದ್ದಿ ಇತರರು ಉಪಸ್ಥಿತರಿದ್ದರು. ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ತಾ.ಪಂ. ಅಧ್ಯಕ್ಷೆ ರೀಟಾ ಸಿದ್ದಿ ಇದ್ದರು.