ದಾದಿಯರ ಕಾರ್ಯ ಶ್ಲಾಘನೀಯ

12 svr 01
Published on

ಸವಣೂರ: ಕಷ್ಟಕರದಿನಗಳಲ್ಲಿ ನಿರಂತರ ಆರೋಗ್ಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ದಾದಿಯರ ಕಾರ್ಯ ಶ್ಲಾಘನೀಯ ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ತಿಳಿಸಿದರು.

ಜೆಸಿಐ ನಮ್ಮ ಸವಣೂರು ಘಟಕದ ವತಿಯಿಂದ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ದಾದಿಯರ ದಿನಾಚರಣೆಯಲ್ಲಿ ದಾದಿಯರಿಗೆ ಸನ್ಮಾನಿಸಿ ಅವರು ಮಾತನಾಡಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಂಕರಗೌಡ ಹಿರೇಗೌಡ್ರ, ತಾಪಂ ಎಡಿ ಎಸ್.ಎಚ್.ಅಮರಾಪೂರ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷ ವಿದ್ಯಾಧರ ಕುತನಿ ಅಧ್ಯಕ್ಷತೆ ವಹಿಸಿದ್ದರು. 44 ದಾದಿಯರಿಗೆ ಸನ್ಮಾನಿಸಿ ಕೊಡೆಗಳನ್ನು ವಿತರಿಸಲಾಯಿತು.

ಟಿಎಚ್​ಒ ಡಾ. ಚಂದ್ರಕಲಾ ಜೆ, ಜೆಸಿಐ ನಿಕಟ ಪೂರ್ವ ಅಧ್ಯಕ್ಷ ಯೋಗೇಂದ್ರ ಜಂಬಗಿ, ಉಪಾಧ್ಯಕ್ಷ ಶಂಕ್ರಯ್ಯ ಹಿರೇಮಠ, ಅಶೋಕ ಕಾಳಶೆಟ್ಟಿ, ಗಣೇಶಗೌಡ ಪಾಟೀಲ, ದೀಲಿಪ್ ಜೈನ್, ಮಲ್ಲಪ್ಪ ನೀರಲಗಿ, ರಾಜು ಮುಳಗುಂದ, ರಾಜು ಗುಡಿಸಾಗರ ಹಾಗೂ ಇತರರು ಪಾಲ್ಗೊಂಡಿದ್ದರು. ಆನಂದ ಮತ್ತಿಗಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net