

ಬಾಗಲಕೋಟೆ: ಲೋಕಸಭಾ ಚುನಾವಣೆ-೨೦೨೪ರ ನೀತಿ ಸಂಹಿತೆ ಉಲ್ಲಂಘನೆಯಡಿ ಕುಳಗೇರಿ ಚೆಕ್‌ಪೋಸ್ಟ ೧ ಮತ್ತು ೨ ರಲ್ಲಿ ಪ್ರತ್ಯೇಕ ೯ ಪ್ರಕರಣದಡಿ ದಾಖಲೆ ಇಲ್ಲದ ಒಟ್ಟು ೧೫.೬೧ ಲಕ್ಷ ರೂ.ಗಳ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ ೧ ರಲ್ಲಿ ಮಂಗಳವಾರ ಬೆಳಗಿನ ಜಾವ ಕೆರೂರ ಸಂತೆಗೆ ಆಗಮಿಸುತ್ತಿರುವ ಗೂಡ್ಸ್ ವಾಹನ, ತುಮಕೂರು ಜಿಲ್ಲೆ ತಾವರೆ ಕೆರೆ, ಗದಗ ಹಾಗೂ ಆಲೂರ ಎಸ್.ಕೆ ಕಡೆಯಿಂದ ಆಗಮಿಸುತ್ತಿರುವ ವಿವಿಧ ವಾಹನಗಳನ್ನು ಐ.ವಿ.ಬಸರಿಕಟ್ಟಿ ನೇತೃತ್ವದ ಸ್ಟಾö್ಯಟಿಕ್ ಸರ್ವೇಲೆನ್ಸ್ ತಂಡ ತಪಾಸಣೆ ಕೈಗೊಂಡಾಗ ಪ್ರತ್ಯೇಕ ೪ ಪ್ರಕರಣಗಳಲ್ಲಿ ಒಟ್ಟು ೩.೨೭ ಲಕ್ಷ ರೂ.ಗಳ ದಾಖಲೆ ಇಲ್ಲದ ಹಣವನ್ನು ಜಪ್ತ ಮಾಡಿಕೊಂಡಿದ್ದಾರೆ.
ಕುಳಗೇರಿ ಕ್ರಾಸ್ ಚೆಕ್‌ಪೋಸ್ಟ ೨ರಲ್ಲಿ ಬೆಳಗಿನ ಜಾವ ವಿವಿಧ ವಾಹನಗಳ ತಪಾಸಣೆ ವೇಳೆಯಲ್ಲಿ ಪ್ರತ್ಯೇಕ ೫ ಪ್ರಕರಣಗಳಡಿ ಒಟ್ಟು ೭.೨೮ ಲಕ್ಷ ರೂ.ಗಳನ್ನು ಎ.ಕೆ.ಉಗಲವಾಡ ನೇತೃತ್ವದ ಸ್ಟಾö್ಯಟಿಕ್ ಸರ್ವೇಲೆನ್ಸ್ ತಂಡ ವಶಕ್ಕೆ ಪಡೆದುಕೊಂಡಿದೆ. ಅಲ್ಲದೇ ಬೆಳಿಗ್ಗೆ ೧೦ ಗಂಟೆ ನಂತರದಲ್ಲಿ ಕೆರೂರಿಗೆ ಹೊರಟ ಟಾಟಾ ೧೦೭ ವಾಹನದಲ್ಲಿ ೧.೫೬ ಲಕ್ಷ ರೂ, ಟಾಟಾ ಗೂಡ್ಸ್ ವಾಹನದಲ್ಲಿ ೬೦ ಸಾವಿರ ರೂ, ಹಾಗೂ ಬುಲೇರೋ ವಾಹನ ತಪಾಸಣೆ ವೇಳೆ ೨.೨೦ ಲಕ್ಷ ರೂ. ದೊರೆತಿರುವುದಾಗಿ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.