

ಬಾಗಲಕೋಟೆ: ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಇಲ್ಲಂಘಿಸಿ ರವಿವಾರ ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.74,000 ನಗದು ಹಣವನ್ನು ಕುಳಗೇರಿ ಕ್ರಾಸ್ ಚೆಕ್‍ಪೋಸ್ಟನಲ್ಲಿ ತಪಾಸನೆ ವೇಳೆ ವಶಕ್ಕೆ ಪಡೆಯಲಾಗಿದೆ.
ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಕುಳಗೇರಿ ಕ್ರಾಸ್ ಚೆಕ್‍ಪೋಸ್ಟನಲ್ಲಿ ರಾಮದುರ್ಗದಿಂದ ಕೆರೂರಗೆ ಹೊರಟ ಕಾರನ್ನು ಪರಿಶೀಲಿಸಿದಾಗ ಸಂಶಯಾತ್ಮಕವಾಗಿ ಕಂಡುಬಂದ 2.74 ಲಕ್ಷ ರೂ.ಗಳ ಹಣವನ್ನು ವಶಕ್ಕ ಪಡೆಯಲಾಗಿದೆ ಎಂದು ಬಾದಾಮಿ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ದುರುಗೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.