ದಾಂಡೇಲಿ ಅಭಿವೃದ್ಧಿಗೆ ಯೋಜನೆ ರೂಪಿಸಲು ಕ್ರಮ

07DND1
Published on

ದಾಂಡೇಲಿ: ನಗರದಲ್ಲಿ ಈಗಾಗಲೇ ವಿವಿಧ ಇಲಾಖೆಗಳಿಂದ ಕೈಗೆತ್ತಿಕೊಳ್ಳಲಾದ ಕೆಲ ಅಭಿವೃದ್ಧಿ ಪರ ಯೋಜನೆಗಳು ಹಾಗೂ ಮುಂಬರುವ ದಿನಗಳಲ್ಲಿ ಅವಶ್ಯಕತೆ ಇರುವ ಕಾರ್ಯ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಯುಕ್ತ ಡಾ. ಸೈಯದ್ ಜಾಹೇದಲಿ ತಿಳಿಸಿದರು.

ನಗರದಲ್ಲಿ ಸೋಮವಾರ ಪ್ರೆಸ್ ಕ್ಲಬ್​ನಿಂದ ಕರೆಯಲಾದ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜೆ.ಎನ್. ರಸ್ತೆಯಲ್ಲಿ ಸಸಿಗಳನ್ನು ನೆಟ್ಟು ಸಂರರಕ್ಷಿಸಲು ದಾನಿಗಳ ಸಹಕಾರ ಕೋರಿದಾಗ ವೆಸ್ಟ್​ಕೋಸ್ಟ್ ಪೇಪರ್ ಮಿಲ್ ಹಾಗೂ ಆರಣ್ಯ ಇಲಾಖೆಯ ಅಧಿಕಾರಿಗಳು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಹಳಿಯಾಳ ತಾಲೂಕು ವೈದ್ಯಾಧಿಕಾರಿ ಡಾ. ರಮೇಶ ಕದಂ ಮಾತನಾಡಿ, ಕೋವಿಡ್-19ರ ಗಂಭೀರತೆ ಅರಿತು ಸೋಂಕು ಹರಡದಂತೆ ಎಚ್ಚರ ವಹಿಸುವುದರ ಜೊತೆಗೆ ಸೋಂಕಿನಿಂದ ಸಾವು ನಿಯಂತ್ರಿಸುವುದರ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದರು.

ಹಳಿಯಾಳದ ಕೆಯುಡಬ್ಲೂ.ಸ್ ಸಹಾಯಕ ಇಂಜಿನಿಯರ್ ಅಶೋಕ ಶಿರೂರ ಮಾತನಾಡಿ, ನಗರಕ್ಕೆ 24*7 ಕುಡಿಯುವ ನೀರಿನ ಪೂರೈಸಲು ಪ್ರಸ್ತಾವನೆ ಸಿದ್ಧಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿ ಸರ್ಕಾರದ ಒಪ್ಪಿಗೆಯ ಮೇರೆಗೆ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದರು.

ಸಭೆಯ ಅಧ್ಯಕ್ಷತೆಯನ್ನು ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ ವಹಿಸಿದ್ದರು.

ಸಭೆಯಲ್ಲಿ ಹೆಸ್ಕಾಂನ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಪುರುಷೋತ್ತಮ ಮಲ್ಯಾ, ಸಿಪಿಐ ಪ್ರಭು ಗಂಗನಹಳ್ಳಿ, ವೆಸ್ಟ್​ಕೋಸ್ಟ್ ಪೇಪರ್ ಮಿಲ್​ನ ಸಂಪರ್ಕ ಅಧಿಕಾರಿ ರಾಜೇಶ ತಿವಾರಿ, ಕೆಯುಡಬ್ಲೂಎಸ್ ಇಲಾಖೆಯ ಸಹಾಯಕ ಅಭಿಯಂತರ ಸ್ರುಜನ್ ಗೌಡ, ನಗರದ ಕೆಎಸ್​ಆರ್​ಟಿಸಿ ಅಧೀಕ್ಷಕ ಸಂಗಮೇಶ ಎಸ್. ಗೌರಿಕಂಠಿಮಠ, ಸಹಾಯಕ ನಿರೀಕ್ಷಣಾ ಅಧಿಕಾರಿ ಸಿದ್ದು ಎ. ನಾಗಣಿ, ಆರ್​ಎಫ್​ಒ ವಿನಯ ಭಟ್, ಸಂತೋಷ ಚವ್ಹಾಣ, ಆರ್​ಟಿಒ ಅಧಿಕಾರಿ ಕಾಳೆ ಸಿಂಗೆ, ಪತ್ರಕರ್ತ ಸಂಘದ ಡಾ. ಬಿ.ಪಿ. ಮಹೇಂದ್ರಕುಮಾರ, ಸಂದೇಶ ಜೈನ್, ಅಕ್ಷಯ ಗಿರಿ ಗೌಸಾವಿ, ಸರಫ್​ರಾಜ ಶೇಖ ಉಪಸ್ಥಿತರಿದ್ದರು.

ಪತ್ರಕರ್ತ ಸಂಘದ ಅಧ್ಯಕ್ಷ ಯು.ಎಸ್. ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿ.ಎನ್. ವಾಸರೆ ನಿರೂಪಿಸಿದರು. ಸಂಘದ ಕಾಯರ್åದರ್ಶಿ ಜಡೆ ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net