

ಶ್ರೀರಂಗಪಟ್ಟಣ: ತಾಲೂಕಿನ ದರಸಗುಪ್ಪೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದೊಡ್ಡೇಗೌಡನಕೊಪ್ಪಲು ಗ್ರಾಮದ ಸರಿತಾ ಶಿವರಾಮು ಅವಿರೋಧವಾಗಿ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯಲ್ಲಿ 14 ಜನ ಸದಸ್ಯರಿದ್ದು, ಈ ಹಿಂದಿನ ಅಧ್ಯಕ್ಷೆ ರಂಜಿನಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಾಂಪುರ ಮುರಳಿ ಅವರು ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಹೀಗಾಗಿ ಅಧ್ಯಕ್ಷರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಸರಿತಾ ಶಿವರಾಮು ಒಬ್ಬರೇ ನಾಮಪತ್ರ ಸಲ್ಲಿಸಿ ಇನ್ಯಾರು ಸ್ಪರ್ಧೆಗಿಳಿಯದ ಕಾರಣ ಚುನಾವಣಾಧಿಕಾರಿ ನಾಗೇಂದ್ರ ಅವರು ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.
ನೂತನ ಅಧ್ಯಕ್ಷೆ ಸರಿತಾ ಶಿವರಾಮು ಅವರಿಗೆ ಸದಸ್ಯರು ಹಾಗೂ ಮುಖಂಡರು ಹೂಮಾಲೆ ಹಾಕಿ ಅಭಿನಂದಿಸಿ ಶುಭ ಕೋರಿದರು.
ಸರಿತಾ ಶಿವರಾಮು ಮಾತನಾಡಿ, ಪ್ರಗತಿದಾಯಕ ಅಭಿವೃದ್ಧಿ ಮೂಲಕ ಹಳ್ಳಿಗಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಗಳ ನಿವಾರಿಸಿ ಪಾರದರ್ಶಕ ಆಡಳಿತ ನೀಡುವ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಂಪುರ ಮುರಳಿ, ಸದಸ್ಯರಾದ ಶ್ರೀಧರ್, ಶಿವಕುಮಾರ್, ಸುಜಯ್, ರಜಿನಿ, ಮಾದೇಶ್, ರಂಜಿನಿ, ರಾಧಾ, ಶಿವಮ್ಮ, ರಾಮಚಂದ್ರು, ಪಿಡಿಒ ಕೃಷ್ಣಪ್ಪಗೌಡ, ಕಾರ್ಯದರ್ಶಿ ಭವ್ಯಾ, ಕಾಂಗ್ರೆಸ್ ಮುಖಂಡರಾದ ಪ್ರಾಣೇಶ್, ರವೀಂದ್ರ, ನಾರಾಯಣಪ್ಪ, ಪಾಂಡು, ವೆಂಕಟೇಶಮೂರ್ತಿ, ಗುರುಪ್ರಸಾದ್, ವಿಜೇಂದ್ರ, ಪುಟ್ಟು, ನಾಗೇಂದ್ರ, ಶಿವು, ಶಿವರಾಮು ಇತರರು ಹಾಜರಿದ್ದರು.