ದರ ಹೆಚ್ಚಳವಾದ್ರೂ ಹೊಸ ಸಂಪರ್ಕಕ್ಕೆ ಡಿಮಾಂಡ್​!

SAMSKARANA GHATAKA
Published on

ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು

ಹನ್ನೊಂದು ವರ್ಷಗಳ ನಂತರ (ಏ.1ರಿಂದ) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನೀರಿನ ದರ ಶೇ.3 ಹೆಚ್ಚಳಗೊಳಿಸಿದರೂ ನಗರವಾಸಿಗಳು ತಲೆಕೆಡಿಸಿಕೊಂಡಿಲ್ಲ. ಏಪ್ರಿಲ್​ ಕೊನೆಯ ವಾರದಲ್ಲಿ ಕಾವೇರಿ ನೀರಿಗಾಗಿ 8,060 ಅರ್ಜಿಗಳು ಸಲ್ಲಿಕೆಯಾಗಿರುವುದು ಇದಕ್ಕೆ ನಿದರ್ಶನ.

ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳು ಬೆಲೆ ಏರಿಕೆ ಕಾಣುತ್ತಿದ್ದು, ನೀರಿನ ದರ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿರುವುದು ಜನರನ್ನು ಅಲುಗಾಡಿಸಿಲ್ಲ ಎಂಬಂತೆ ಭಾಸವಾಗುತ್ತಿದೆ. 2024ರ ನವೆಂಬರ್​ನಿಂದ ಏಪ್ರಿಲ್​ ತನಕ 39,866 ಅರ್ಜಿಗಳು ಸಲ್ಲಿಕೆಯಾಗಿದ್ದು, 31 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ ಡಿಮಾಂಡ್​ ನೋಟ್​ ವಿತರಿಸಲಾಗಿದೆ. ವಿವಿಧ ಕಾರಣಗಳಿಂದ 4 ಸಾವಿರ ಅರ್ಜಿಗಳನ್ನು ಬಾಕಿ ಉಳಿಸಲಾಗಿದ್ದು, ಕಾವೇರಿ ಸಂಪರ್ಕ ಯೋಜನೆ ಯಶಸ್ವಿಯಾಗಿ ಸಾಗುತ್ತಿದೆ. ಕಾವೇರಿ ಸಂಪರ್ಕ ಅಭಿಯಾನ ಸೇರಿ ಹಲವು ಜಾಗೃತಿ ಕಾರ್ಯಕ್ರಮಗಳ ಲವಾಗಿ 6 ತಿಂಗಳಲ್ಲಿ ಸುಮಾರು 14 ಸಾವಿರ ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಇದರಿಂದ ನೀರಿನ ದರ ಏರಿಕೆ ಕಂಡರೂ ಸಂಪರ್ಕದಲ್ಲಿ ಇಳಿಕೆ ಇಲ್ಲ ಎಂಬುದು ಸಾಭೀತಾಗಿದೆ.

ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಸರಾಸರಿ ತಲಾ ಕಾವೇರಿ ನೀರಿನ ಬಳಕೆ ದಿನಕ್ಕೆ 108 ಲೀಟರ್​ ಆಗಿದೆ. 4&5 ಸದಸ್ಯರ ಸರಾಸರಿ ಕುಟುಂಬವು ತಿಂಗಳಿಗೆ ಸುಮಾರು 15,000 ಲೀಟರ್​ಗಳನ್ನು ಬಳಸುತ್ತದೆ. ಅಂತಹ ಕುಟುಂಬಕ್ಕೆ, ಹೊಸ ನೀರಿನ ಶುಲ್ಕ 166 ರೂ.ಆಗಿರುತ್ತದೆ. ಮೊದಲ 8,000 ಲೀಟರ್​ಗಳಿಗೆ ಪ್ರತಿ ಕಿಲೋಲೀಟರ್​ಗೆ 8.5 ರೂ.ದರವಿದ್ದರೆ, ಮುಂದಿನ 7,000 ಲೀಟರ್​ಗಳಿಗೆ 14 ರೂ.ದರದಲ್ಲಿ ವಿಧಿಸಲಾಗುತ್ತದೆ. ಮೀಟರ್​ ವೆಚ್ಚ ಮತ್ತು ಇತರ ಶುಲ್ಕಗಳನ್ನು ಪರಿಗಣಿಸಿ, ಮನೆಯ ಒಟ್ಟು ಮಾಸಿಕ ಬಿಲ್​ ಸುಮಾರು 250&270 ರೂ.ಆಗಿರುತ್ತದೆ. ತಿಂಗಳಿಗೆ 15,000 ಲೀಟರ್​ಗಳನ್ನು ಬಳಸುವ ಅಪಾರ್ಟ್​ಮೆಂಟ್​ಗಳಿಗೆ ಒಟ್ಟು 400-&500 ರೂ.ಮಾಸಿಕ ಬಿಲ್​ ಬರುತ್ತದ್ದು, ಇದು ಮೇ ಬಿಲ್ಲಿನ ಒಂದು ಚಿತ್ರಣವಾಗಿದೆ.

ಇಎಂಐ ಸೌಲಭ್ಯ: ಕಾವೇರಿ ನೂತನ ಸಂಪರ್ಕದ "ಪ್ರೋರೇಟಾ' ಶುಲ್ಕವನ್ನು ಕಂತುಗಳ ಮೂಲಕ ಪಾವತಿಸಲು ಜಲಮಂಡಳಿ ಹೊಸ ಯೋಜನೆ ರೂಪಿಸಿದ್ದು, ಶ್ರೀದಲ್ಲೇ ಅನಿಷ್ಠಾನಗೊಳ್ಳಲಿದೆ. ಸಣ್ಣ ನಿವೇಶನದಾರರಿಗೆ ಈ ಯೋಜನೆ ಲಪ್ರದವಾಗಿದ್ದು, 600 ಚದರ ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮಾತ್ರ ಈ ಸೌಲಭ್ಯ ಲಭ್ಯವಿರುತ್ತದೆ. ಇಷ್ಟು ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿದವರು 2,900 ರೂ.ಠೇವಣಿ ಹಾಗೂ ಡಿಮಾಂಡ್​ ನೋಟ್​ ಬಂದಾಗ 1000 ರೂ.ಪಾವತಿಸಿದರೆ, ಕಾವೇರಿ ಸಂಪರ್ಕ ಶ್ರೀ ಸಿಗಲಿದೆ. ಉಳಿಕೆ ಹಣವನ್ನು 12 ಕಂತುಗಳಲ್ಲಿ ಪಾವತಿಸಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಣಕ್ಕೆ ಕಾವೇರಿ ಹರಿವು ಹೆಚ್ಚು!: ಬೆಂಗಳೂರಿನ ನಾಲ್ಕು ವಲಯಗಳ ಪೈಕಿ ದಣ ವಲಯದಲ್ಲಿ ಅತಿ ಹೆಚ್ಚು (14,000)ಅರ್ಜಿಗಳು ಸಲ್ಲಿಕೆಯಾಗಿದ್ದು, 6,000 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಪೂರ್ವ ವಲಯದಲ್ಲಿ 12 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, 2 ಸಾವಿರ ಸಂಪರ್ಕ ನೀಡಲಾಗಿದೆ. ಪಶ್ಚಿಮದಲ್ಲಿ 10 ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, 3,000 ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. 6 ತಿಂಗಳಲ್ಲಿ 4 ವಲಯಗಳಿಂದ ಪ್ರೋರೇಟಾ ಶುಲ್ಕ 210 ಕೋಟಿ ರೂ.ಸಂಗ್ರಹವಾಗಿದೆ. ಶುಲ್ಕ ಸಂಗ್ರಹದಲ್ಲೂ ದಣ ವಲಯ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net