ದಯಾಮರಣಕ್ಕೆ ಗುತ್ತಿಗೆದಾರ ಅರ್ಜಿ

01
Published on

ಬೈಲಹೊಂಗಲ: ತಾಲೂಕಿನ ಕೊರವಿಕೊಪ್ಪ ಗ್ರಾಮದ ಮಣಿಕಂಠ ಕನ್ಸ್ಟ್ರಕ್ಷನ್ ಕಂಪನಿ ಮಾಲೀಕ ಬಸಪ್ಪ ಯಲ್ಲಪ್ಪ ದಳವಾಯಿ ದಯಾ ಮರಣ ಕೋರಿ ರಾಷ್ಟ್ರಪತಿಗಳ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ.

ಬಸಪ್ಪ ಅವರು, ಹುಬ್ಬಳ್ಳಿಯ ಅಶೋಕ ನಗರದಲ್ಲಿ ಉಪ ಕಾರಾಗೃಹದಲ್ಲಿ 4 ಸಂಖ್ಯೆ ಬ್ಯಾರೆಕ್ಸ್ ನಿರ್ಮಾಣ ಕಾಮಗಾರಿಯನ್ನು ಹುಬ್ಬಳ್ಳಿಯ ಕ್ಲಾಸ್-1 ಗುತ್ತಿಗೆದಾರ ಅರವಿಂದ ಜೆ.ಚವ್ಹಾಣ ಅವರು ಇಂಜಿನಿಯರ್ ಮತ್ತು ಕನ್ಸ್ಟ್ರಕ್ಷನ್ ಕಂಪನಿ ಹೆಸರಿನಲ್ಲಿ ಗೃಹ ಇಲಾಖೆ ಅನುದಾನಡಿ ಮಂಜೂರಾಗಿತ್ತು.

ಒಪ್ಪಂದದ ಪ್ರಕಾರ ಹಣ ನೀಡದೆ ಬೇರೆ ಗುತ್ತಿಗೆದಾರನಿಗೆ ಕಾಮಗಾರಿ ನೀಡಿದರು. ಈ ಕುರಿತು ಪ್ರಶ್ನಿಸಿದರೆ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. 84 ಲಕ್ಷ ರೂ.ಹಣ ನೀಡದೆ ಇಲ್ಲ-ಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಜೀವಕ್ಕೆ ಹಾನಿಯಾದರೆ ಅರವಿಂದ ಚವ್ಹಾಣ ಹಾಗೂ ಅಧಿಕಾರಿಗಳೇ ಹೊಣೆ ಎಂದು ಬಸಪ್ಪ ದಳವಾಯಿ ತಿಳಿಸಿದರು.

ಈ ಕುರಿತು ಸಂಬಂಧಿತ ಸಚಿವರು, ಅಧಿಕಾರಿಗಳಿಗೆ ತಿಳಿಸಿದರೂ ನ್ಯಾಯ ಸಿಗುತ್ತಿಲ್ಲ. ಈಗಾಗಲೇ ನನ್ನ ಆಸ್ತಿ ಮೇಲೆ ಲಕ್ಷಾಂತರ ರೂ. ಸಾಲ ಮಾಡಿ, ಬಂಗಾರದ ಆಭರಣ ಮಾರಾಟ ಮಾಡಿ ಕಾಮಗಾರಿ ಮಾಡಿದ್ದೇನೆ. ನ್ಯಾಯ ಸಿಗದ ಹಿನ್ನೆಲೆಯಲ್ಲಿ ದಯಾ ಮರಣಕ್ಕೆ ರಾಷ್ಟ್ರಪತಿ, ರಾಜ್ಯಪಾಲರು, ಬೆಳಗಾವಿ, ಧಾರವಾಡ-ಹುಬ್ಬಳ್ಳಿ ಜಿಲ್ಲಾಧಿಕಾರಿ, ಎಸ್ಪಿ ಅವರಿಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಗುತ್ತಿಗೆದಾರ ಬಸಪ್ಪ ಯಲ್ಲಪ್ಪ ದಳವಾಯಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net