ದಮನಿತರು ಶಿಕ್ಷಣ ಕಲಿಕೆಗೆ ಮಹತ್ವ ನೀಡಬೇಕು

bkt-23-2
ಹಿರಿಯ ಪತ್ರಕರ್ತ ಮುತ್ತು ನಾಯ್ಕರ ಮಾತನಾಡಿದರು.
Published on

ಬಾಗಲಕೋಟೆ: ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದವರು, ಸಾಮಾಜಿಕವಾಗಿ ಶೋಷಣೆಗೆ ಒಳಗಾದವರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮುಖ್ಯವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಮುತ್ತು ನಾಯ್ಕರ ಅಭಿಪ್ರಾಯ ವ್ಯಕ್ತಪಡಿಸಿದರು.

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಬಾಗಲಕೋಟೆ ಜಿಲ್ಲಾ ಹಾಗೂ ಬಾದಾಮಿ ತಾಲೂಕಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬಾಗಲಕೋಟೆ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಭಾನುವಾರ ನಡೆದ ದನಿತ ಲೋಕದ ಸಬಲೀಕರಣ ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದಮನಿತರು ಕೇವಲ ದಲಿತ ವರ್ಗಕ್ಕೆ ಸೇರಿದವರಲ್ಲ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಎಲ್ಲಾ ಧರ್ಮಗಳ ಜನಸಮೂಹವಾಗಿದೆ. ದಮನಿತರು ಬರಿ ಹೊಟ್ಟೆ ಪಾಡಿಗೆ ದುಡಿಯುವದನ್ನು ಬಿಟ್ಟು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ನಡೆಯಬೇಕಾಗಿದೆ. ಯಾರು ಆರ್ಥಿಕವಾಗಿ ಬಲಾಢ್ಯರಾಗುತ್ತಾರೋ ಅವರು ಜಾತಿ ಚೌಕಟ್ಟು ಮೀರಿ ಬೆಳೆಯಬಲ್ಲರು. ಆರ್ಥಿಕವಾಗಿ ಬೆಳವಣಿಗೆ ಹೊಂದರಬೇಕಾದರೆ ಮೊದಲು ಶಿಕ್ಷಣವಂತರಾಗಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಯಮನಪ್ಪ ಗುಣದಾಳ ಮಾತನಾಡಿ, ದೇಶಕ್ಕೆ ಅಂಟಿಕೊAಡಿರುವ ಬಹುದೊಡ್ಡ ರೋಗವೇ ಜಾತಿ ವ್ಯವಸ್ಥೆಯಾಗಿದೆ. ಜಾತಿ ವ್ಯವಸ್ಥೆ ಹೋಗಬೇಕಾದರೆ ಮೊದಲು ನಾವೆಲ್ಲ ವೈಜ್ಞಾನಿಕತೆ ಅಳವಡಿಸಿಕೊಳ್ಳಬೇಕಿದೆ. ನಮ್ಮಲ್ಲಿ ವೈಜ್ಞಾನಿಕತೆ ಬರಬೇಕಾದರೆ ನಾವೆಲ್ಲ ಶಿಕ್ಷವಂತರಾಗಬೇಕಾಗಿದೆ. ಬಸವಣ್ಣ, ಡಾ.ಅಂಬೇಡ್ಕರ, ಬುದ್ದರ ಆಶಯಗಳಂತೆ ಮುನ್ನಡೆಯಬೇಕಾಗಿದೆ ಎಂದು ತಿಳಿಸಿದರು.

ಡಾ.ಎಲ್.ಜಿ.ಗಗ್ಗರಿ ಉಪನ್ಯಾಸ ನೀಡಿದರು. ಎಂ.ಐ. ಚಿಕ್ಕೂರಮಠ ನಿರೂಪಿಸಿದರು. ಬಿ.ಆರ್.ಪೂಜಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net