ದನದ ಮಾಂಸ ಸಾಗಿಸುತ್ತಿದ್ದ ವಾಹನ ವಶ

24bkl2 (3)
Published on

ಭಟ್ಕಳ: ಶಿರಾಲಿ ಚೆಕ್​ಪೋಸ್ಟ್ ಬಳಿ ಮೀನು ಸಾಗಾಟ ಮಾಡುವ ಕಂಟೈನರ್ ಲಾರಿಯಲ್ಲಿ ದನದ ಮಾಂಸ ಸಾಗಿಸುತ್ತಿದ್ದವರನ್ನು ತಡೆದ ಗ್ರಾಮೀಣ ಠಾಣೆ ಪೊಲೀಸರು ಅವರ ವಿರುದ್ಧ ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿ ಮೂಲದ ಚಾಲಕ ಉಮರ್ ಫಾರುಖ್ ಅದಂ ಸಾಬ್, ದಾರವಾಡದ ಮೈನುದ್ದೀನ್ ಹಜರತ್ ಅಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳು. ಇವರು ಬುಧವಾರ ಹುಬ್ಬಳ್ಳಿ ಕಡೆಯಿಂದ ಮಂಗಳೂರಿಗೆ ದನದ ಮಾಂಸ ಸಾಗಾಟ ಮಾಡುತ್ತಿದ್ದರು ಎನ್ನಲಾಗಿದೆ. ಶಿರಾಲಿ ಚೆಕ್​ಪೋಸ್ಟ್ ಬಳಿ ಗಸ್ತು ನಿಂತಿದ್ದ ಗ್ರಾಮೀಣ ಠಾಣೆ ಪಿಎಸ್​ಐ ಅನುಮಾನದ ಮೇರೆಗೆ ವಾಹನ ತಪಾಸಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net