ದತ್ತಾತ್ರೇಯ ಕುರಹಟ್ಟಿಗೆ ರಂಗಸಾಧನೆ ಪ್ರಶಸ್ತಿ; ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟ

sfd
Published on

ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ 2021ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ‘ಜೀವಮಾನ ರಂಗಸಾಧನೆ ಪ್ರಶಸ್ತಿ’ಗೆ ಹಾವೇರಿ ಜಿಲ್ಲೆಯ ವೃತ್ತಿರಂಗಭೂಮಿ ಕಲಾವಿದ ಹಾಗೂ ಗಾಯಕ ದತ್ತಾತ್ರೇಯ ಕುರಹಟ್ಟಿ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಪೊ›.ಆರ್. ಭೀಮಸೇನ ನೇತೃತ್ವದ ಕಾರ್ಯಕಾರಿ ಸಮಿತಿ ಗುರುವಾರ ಪುರಸ್ಕೃತರ ಆಯ್ಕೆ ಪಟ್ಟಿ ಬಿಡುಗಡೆ ಮಾಡಿದೆ. ಜೀವಮಾನ ರಂಗಸಾಧನೆ ಪ್ರಶಸ್ತಿ 50 ಸಾವಿರ ನಗದು ಒಳಗೊಂಡಿದೆ. ‘ವಾರ್ಷಿಕ ರಂಗ ಪ್ರಶಸ್ತಿ’ಗೆ 23 ರಂಗ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ‘ಯುವ ರಂಗ ಪ್ರಶಸ್ತಿ’ಗೆ ಬೆಳಗಾವಿಯ ಮಹಾಂತೇಶ ರಾಮದುರ್ಗ ಹಾಗೂ ‘ಗಡಿನಾಡು ರಂಗ ಪ್ರಶಸ್ತಿ’ಗೆ ಆದವಾನಿಯ ಬದಿನೇಹಾಳು ಭೀಮಣ್ಣ ಭಾಜನರಾಗಿದ್ದಾರೆ. ಈ ಪ್ರಶಸ್ತಿಗಳು ತಲಾ 25 ಸಾವಿರ ನಗದು ಪುರಸ್ಕಾರ ಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭ ಏಪ್ರಿಲ್​ನಲ್ಲಿ ಬಳ್ಳಾರಿಯಲ್ಲಿ ನಡೆಯಲಿದೆ.

ವಾರ್ಷಿಕ ರಂಗಪ್ರಶಸ್ತಿ ಪುರಸ್ಕೃತರು: ಹಾಲಯ್ಯ ವೀರಭದ್ರಯ್ಯ ಹುಡೇಜಾಲಿ (ಕೊಪ್ಪಳ), ಸಿ.ಜೆ. ಲತಾಶ್ರೀ (ಬಳ್ಳಾರಿ), ಬಿ. ಗಂಗಣ್ಣ (ಬಳ್ಳಾರಿ), ಲಲಿತಾಬಾಯಿ ಲಾಲಪ್ಪ ದಶವಂತ (ವಿಜಯಪುರ), ಹನುಮಂತ ನಿಂಗಪ್ಪ ಸುಣಗದ (ಬಾಗಲಕೋಟೆ), ಸುಮಿತ್ರಾ ಯಲ್ಲವ್ವ ಮಾದರ (ಬಾಗಲಕೋಟೆ), ಅಡವಯ್ಯ ಸ್ವಾಮಿ ವಿ. ಕುಲಕರ್ಣಿ (ಬೆಳಗಾವಿ), ಶಾಂತಪ್ಪ ರುದ್ರಗೌಡ ಜಾಲಿಕೋನಿ (ಹಾವೇರಿ), ವಿಜಯಕುಮಾರ ಜಿತೂರಿ (ಗದಗ), ಕೆ.ವೀರಯ್ಯ ಸ್ವಾಮಿ (ದಾವಣಗೆರೆ), ಬಿ.ಪಿ. ಯಮನೂರ ಸಾಬ್ (ದಾವಣಗೆರೆ), ಡಿ. ಅಡವೀಶಯ್ಯ (ತುಮಕೂರು), ಟಿ. ವಿಮಲಾಕ್ಷಿ (ಚಿತ್ರದುರ್ಗ), ಪೊ›.ಎಸ್.ಸಿ. ಗೌರಿಶಂಕರ (ಶಿವಮೊಗ್ಗ), ಕೆ.ಎಂ. ನಂಜುಂಡಪ್ಪ (ಚಿಕ್ಕಮಗಳೂರು), ಎಂ.ಎನ್. ಸುರೇಶ (ಹಾಸನ), ಸರೋಜಾ ಹೆಗಡೆ (ಮೈಸೂರು), ಸರೋಜಿನಿ ಶೆಟ್ಟಿ (ಮಂಗಳೂರು), ಚಂದ್ರಹಾಸ ಸುವರ್ಣ (ಉಡುಪಿ), ಡಿ. ಕೆಂಪಣ್ಣ (ಬೆಂಗಳೂರು ಗ್ರಾಮಾಂತರ) ಡಾ.ಜೆ. ಶ್ರೀನಿವಾಸಮೂರ್ತಿ (ಬೆಂಗಳೂರು), ಸುಧಾ ಹೆಗಡೆ (ಬೆಂಗಳೂರು), ಎಂ.ಸಿ. ಸುಂದರೇಶ (ಬೆಂಗಳೂರು)

ಐವರಿಗೆ ದತ್ತಿ ನಿಧಿ ಪುರಸ್ಕಾರ: ‘ಕಲ್ಚರ್ಡ್ ಕಮೆಡಿಯನ್ ಕೆ.ಹಿರಣ್ಣಯ್ಯ’ ದತ್ತಿ ಪುರಸ್ಕಾರಕ್ಕೆ ಬೆಂಗಳೂರಿನ ಎಚ್. ವೆಂಕಟೇಶ್, ‘ನಟರತ್ನ ಚಿಂದೋಡಿ ವೀರಪ್ಪನವರ’ ದತ್ತಿ ಪುರಸ್ಕಾರಕ್ಕೆ ಬೆಂಗಳೂರಿನ ಜಲಮಂಡಳಿ ಆರ್. ರಾಮಚಂದ್ರ, ‘ಪದ್ಮಶ್ರೀ ಚಿಂದೋಡಿ ಲೀಲಾ’ ದತ್ತಿ ಪುರಸ್ಕಾರ ಪ್ರಶಸ್ತಿಗೆ ಕಲಬುರಗಿಯ ಸೀತಾ ಚಂದ್ರಕಾಂತ ಮಲ್ಲಾಬಾದಿ, ‘ಮಾಲತಿಶ್ರೀ ಮೈಸೂರು’ ದತ್ತಿನಿಧಿ ಪುರಸ್ಕಾರಕ್ಕೆ ಕೊಡಗಿನ ಪಿ.ಎ. ಸರಸ್ವತಿ ಹಾಗೂ ‘ಕೆ. ರಾಮಚಂದ್ರಯ್ಯ ’ದತ್ತಿನಿಧಿ ಪುರಸ್ಕಾರಕ್ಕೆ ವಿಜಯನಗರ ಜಿಲ್ಲೆ ಹೊಸಪೇಟೆಯ ಟಿ.ಬಿ. ಡ್ಯಾಮ್ ಕನ್ನಡ ಕಲಾ ಸಂಘ ಆಯ್ಕೆಯಾಗಿದೆ. ಪ್ರಶಸ್ತಿಗಳು ತಲಾ 10 ಸಾವಿರ ನಗದು ಬಹುಮಾನ ಹಾಗೂ ನಟರಾಜ ವಿಗ್ರಹ ಫಲಕಗಳನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net