

ಹಿರೀಸಾವೆ: ಹೋಬಳಿಯ ದಿಡಗ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಕಾಮನಘಟ್ಟ ಗ್ರಾಮದ ತ್ರಿಮೂರ್ತಿ ಅವಿರೋಧ ಆಯ್ಕೆಯಾದರು.
ಸಂಘದಲ್ಲಿ ಶುಕ್ರವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ತ್ರಿಮೂರ್ತಿ ಹೊರತುಪಡಿಸಿ ಮತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶಿವಮೂರ್ತಿ ಅವಿರೋಧ ಆಯ್ಕೆ ಘೋಷಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಕೆ.ಎನ್.ಹರಿಪ್ರಸಾದ್, ಮಾಜಿ ಸದಸ್ಯ ಕೆ.ಟಿ.ನಾಗರಾಜ್, ದಿಡಗ ಸೊಸೈಟಿ ಮಾಜಿ ನಿರ್ದೇಶಕ ಕೆ.ಪಿ.ರಾಮಕೃಷ್ಣ, ಸಂಘದ ನಿರ್ದೇಶಕರಾದ ಕೆ.ಎನ್.ಸುರೇಶ್, ಕೆ.ಎಸ್.ಕೆಂಪೇಗೌಡ, ದಿಡಗ ಶಾಂತೇಶ್, ಕನುವನಘಟ್ಟ ದಿನೇಶ್, ನಾರಾಯಣ್, ವಿಜಯಲಕ್ಷ್ಮೀ, ಮುಖಂಡರಾದ ದಾಸರಹಳ್ಳಿ ನಂಜೇಗೌಡ, ಡಿ.ಟಿ.ರಂಗಸ್ವಾಮಿ, ಡಿ.ಜಿ.ವೆಂಕಟೇಶ್, ಗುಡಿ ಸುರೇಶ್, ಕಬ್ಬಳಿ ವಾಸು, ಡಿ.ರಂಗಸ್ವಾಮಿ, ಡಿ.ಜಿ.ರಘು, ಡಿ.ಟಿ.ಬಸವರಾಜ್ ಇದ್ದರು.