ತ್ಯಾಗ ಜೀವಿಗಳಿಗೆ ಅನ್ಯಾಯ ಮಾಡಬೇಡಿ

bkt-13-2.
ಬಾಗಲಕೋಟೆ ರೈತರ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಪರಶುರಾಮ ಎಸ್. ಅವರಿಗೆ ಮನವಿ ಸಲ್ಲಿಸಿದರು.
Published on

ಬಾಗಲಕೋಟೆ: ನವನಗರ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಒಳಪಟ್ಟಿರುವ ಭೂ ಮಾಲೀಕರು, ರೈತರ ಸಮಸ್ಯೆ, ಬೇಡಿಕೆ ಆಲಿಸಿ ಸೂಕ್ತವಾದ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಬಾಗಲಕೋಟೆ ರೈತರ ಹಕ್ಕುಗಳ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ರೈತರು ಬಿಟಿಡಿಎ ಹಾಗೂ ಸರ್ಕಾರ ವಿರುದ್ಧ ಘೋಷಣೆ ಕೂಗಿ ಬಳಿಕ ಅಪರ ಜಿಲ್ಲಾಧಿಕಾರಿ ಪರಶುರಾಮ ಎಸ್. ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡ ರವಿ ಕುಮಟಗಿ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ಬಾಗಲಕೋಟೆ ನಗರ ನಿವಾಸಿಗಳಿಗೆ ಪುನರ್ವಸತಿ ಕಲಿಸಲು ನವನಗರ ಯೂನಿಟ್-೩ ನಿರ್ಮಾಣಕ್ಕಾಗಿ ಬಿಟಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಬಾಗಲಕೋಟೆ, ಮುಚಖಂಡಿ ಮತ್ತು ಶೀಗಿಕೇರಿ ಭಾಗದ ರೈತರ ೧೬೪೩ ಎಕರೆ ಜಮೀನುಗಳನ್ನು ವಶಪಡಿಸಿಕೊಂಡಿದ್ದು, ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಸದ್ಯದ ಮಾರುಕಟ್ಟೆ ದರ ನಿಗದಿ ಪಡಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷ್ಣ ಮೇಲ್ದಂಡೆ ಯೋಜನೆ ಅಡಿ ಬಾಧಿತಗೊಂಡ ಮುಳುಗಡೆಯಾದ ಸಂತ್ರಸ್ತರ ಯಜಮಾನಿಗೆ ಹಾಗೂ ಅವರ ಕುಟುಂಬ ಮತ್ತು ವಯಸ್ಕರ ಮಕ್ಕಳಿಗೆ ನಿವೇಶನ ಮತ್ತು ಪರಿಹಾರ ನಿಡಿದಂತೆ ಯುನಿಟ್ -೩ರಲ್ಲಿ ಮನರ್ವಸತಿಗಾಗಿ ಜಮೀನು ಕಳೆದುಕೊಂಡ ರೈತರು ಕೂಡಾ ಸಂತ್ರಸ್ತರಾಗಿದ್ದು, ಹೊಸ ಕಾಯ್ದೆ ಮತ್ತು ಕಾನೂನಿನ ಪ್ರಕಾರ ಶೇ.೨೦ ಜಾಗವನ್ನು ನಮ್ಮ ಜಮೀನುಗಳಲ್ಲಿ ರೈತ ಕುಟುಂಬಗಳಿಗೆ ನೀಡಬೇಕು. ಸರ್ಕಾರವು ಕನಿಷ್ಠ ಪಕ್ಷ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ಮತ್ತು ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಿದ್ದಣ್ಣ ಹಲಕಾಟಿ, ವೀರಣ್ಣ ಬಲಮಿ, ಗೋಪಾಲ ಲಮಾಣಿ, ತವರಪ್ಪ ಲಮಾಣಿ, ಬಸಪ್ಪ ಸ್ವಾಗಿ, ಮಹೇಶ ಅಥಣಿ, ವೀರಣ್ಣ ಹಲಕುರ್ಕಿ, ರಾಜು ರುದ್ರಾಕ್ಷಿ, ಪರಶು ಛಬ್ಬಿ, ನಿಂಗಣ್ಣ ಗೋಡಿ, ಪರಶು ಛಬ್ಬಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net