ತೋವಿವಿ 722 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

bkt-3-2
Published on

ಬಾಗಲಕೋಟೆ: ರಾಜ್ಯದ ಏಕೈಕ ತೋಟಗಾರಿಕೆ ವಿವಿ ಎನ್ನುವ ಹೆಗ್ಗಳಿಕೆ ಹೊಂದಿರುವ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಯಲದಲ್ಲಿಂದು 13 ನೇ ಘಟಿಕೋತ್ಸವ ಜರುಗಿತು.

ವಿವಿ ಸಹಕುಲಾಧಿಪತಿ, ತೋಟಗಾರಿಕೆ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಪದವಿ ಪ್ರಧಾನ ಮಾಡಿದರು. ಸೋಮವಾರ ಬಾಗಲಕೋಟೆ ತೋ.ವಿ.ವಿ. ಸಭಾಂಗಣದಲ್ಲಿ ನಡೆದ 13ನೇ ಘಟಿಕೋತ್ಸವದಲ್ಲಿ ಒಟ್ಟು 722 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಬಿಎಸ್ಸಿ (ಹಾನ್ಸ್) ತೋಟಗಾರಿಕೆಯಲ್ಲಿ 550, ಬಿ.ಟೆಕ್ (ಆಹಾರ ತಂತ್ರಜ್ಞಾನ) 27, ಎಂಎಸ್ಸಿ (ತೋಟಗಾರಿಕೆ) 101, ಪಿಎಚ್ ಡಿ 44 ವಿದ್ಯಾರ್ಥಿಗಳು ಇದ್ದಾರೆ.

ಬಿಎಸ್ಸಿ ತೋಟಗಾರಿಕೆಯಲ್ಲಿ ಒಟ್ಟು 21 ವಿದ್ಯಾರ್ಥಿ/ನಿಯರು 49 ಚಿನ್ನದ ಪದಕ ಪಡೆದರೆ, ಎಎಸ್ಸಿ ತೋಟಗಾರಿಯಲ್ಲಿ 10 ವಿದ್ಯಾರ್ಥಿ/ನಿಯರು 21 ಚಿನ್ನದ ಪದಕ ಹಾಗೂ ಪಿಎಚ್ ಡಿಯಲ್ಲಿ 5 ವಿದ್ಯಾರ್ಥಿ/ನಿಯರು 10 ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಮುಖ್ಯವಾಗಿ ಬಿಎಸ್ಸಿ ತೋಟಗಾರಿಕೆಯಲ್ಲಿ ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಅಮೂಲ್ಯ ಪಾಟೀಲ ಒಟ್ಟು 16 ಚಿನ್ನದ ಪದಕ ಮುಡಿಗೇರಿಸಿಕೊಂಡರು. ರಾಮನಗರದ ಸ್ಮೀತಾ ನಾಗರಾಜ್ ಐದು ಚಿನ್ನದ ಪದಕ ಪಡೆದರು. ಪಿಎಚ್ ಡಿಯಲ್ಲಿ ಅಂಜಲಿ ವಿ.ಎ. 4 ಚಿನ್ನದ ಪದಕ ಹಾಗೂ ಎಂಎಸ್ಸಿ ತೋಟಗಾರಿಕೆಯಲ್ಲಿ ಸೋನಿಕಾ ಎ.ಎಸ್ ಹಾಗೂ ತಾನ್ಯಾ ಎಂ ಗೌಡ ಅವರು ತಲಾ ನಾಲ್ಕು ಚಿನ್ನದ ಪದಕ ಪಡೆದರು.

ಬಿಎಸ್‍ಸಿ ಆಹಾರ ತಂತ್ರಜ್ಞಾನದಲ್ಲಿ ಸ್ಮಿತಾ ಎನ್ 5 ಚಿನ್ನದ ಪದಕ ಪಡೆದರೆ, ಗಾಯತ್ರಿ ಎಸ್.ಆರ್ 4, ಅನಿನ್ ಕುಮಾರ ಆರ್ ಮತ್ತು ಗಗನ್‍ಗೌಡ ಎಂ.ಬಿ ತಲಾ 3, ಸಂತೋಷ ಕಾಚಿ ಮತ್ತು ಗೋವಿಂದ ಕುಮಾರ ತಲಾ 2, ಯಾಸ್‍ಮಿನ್ ಪಿ.ಪಿ, ವಿದ್ಯಾಶ್ರೀ ಗುಂಡಾಳೆ, ಅಶ್ವಥಿ ಸುರೇಶ, ಚಿನ್ಮಯ ಅರುಣ್ ಕೋಪರ್ಡೆ, ಜ್ಯೋತಿ ಜಗ್ಗಲ, ಕೃಷ್ಣಾ ಹೂಗಾರ, ಚಂದ್ರುಶ್ರೀ ಎಸ್, ಅಂಜೀನಯ್ಯ, ಪ್ರವೀಣ ರಾಚೋಳಿ, ತೇಜ ಸಿ.ಆರ್, ಅನನ್ಯ ಎಸ್.ಎಸ್, ಪ್ರಿಯಾಂಕ ಪಿ, ಲಾವಣ್ಯ ಎಸ್.ಎನ್. ಹಾಗೂ ಪ್ರತ್ಯಕ್ಷ ಮೊಗ್ರ ತಲಾ ಒಂದು ಚಿನ್ನದ ಪದಕ ಪಡೆದುಕೊಂಡರು.

ಪಿ.ಎಚ್.ಡಿ ಪದವಿಯಲ್ಲಿ ಅಂಜಲಿ ವಿ.ಎ 4 ಚಿನ್ನದ ಪಡೆದುಕೊಂಡರೆ, ಇಂಪ ಎಚ್.ಆರ್ ಮತ್ತು ಬಸವರಾಜ ಪಡಶೆಟ್ಟಿ ತಲಾ 2 ಹಾಗೂ ಗೌತಮ ವೈ ಮತ್ತು ಸನ್ನತಿ ನಾಯಕ ತಲಾ ಒಂದು ಚಿನ್ನದ ಪದಕ ಪಡೆದರು. ಎಂ.ಎಸ್.ಸ್ಸಿ ತೋಟಗಾರಿಕೆಯಲ್ಲಿ ತಾನ್ಯ ಗೌಡ ಮತ್ತು ಸೋನಿಕಾ ಎ.ಎಸ್ 4 ಚಿನ್ನದ ಪದಕ ಪಡೆದುಕೊಂಡರೆ, ಸಿಂಚನ ಎ.ಎಚ್ 3 ಪದಕ, ಕೀರ್ತನ ವಿ, ಭೂಮಿಕ ವೈ.ಪಿ ಕಿಶೋರ ಕುಮಾರ ತಲಾ 2, ಮೇಘನ ಎಸ್, ಅಕ್ಷತಾ ಕೊಪ್ಪದ, ಲಕ್ಷ್ಮೀ ಗಂಗಲ್, ರಾಜಶ್ರೀ ತಲಾ 1 ಚಿನ್ನದ ಪದಕಗಳನ್ನು ಪಡೆದುಕೊಂಡರು.

ನವದೆಹಲಿ ಸಿಎಸ್ಐಆರ್ ನ ಮಹಾನಿರ್ದೇಶಕಿ ಡಾ.ಎನ್ ಕಲೈಸೆಲ್ವಿ ಘಟಿಕೋತ್ಸವ ಭಾಷಣ ಮಾಡಿದರು. ವಿವಿ ಕುಲಪತಿ ಡಾ. ವಿಷ್ಣುವರ್ಧನ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net